Thursday, March 23, 2023

Latest Posts

CINEMA| ರಾಮ್ ಚರಣ್ ಮತ್ತು ಉಪಾಸನಾ ಮಾಡಿದ ಕಾರ್ಯಕ್ಕೆ ಅಭಿಮಾನಿಗಳ ಭರಪೂರ ಪ್ರಶಂಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಆಸ್ಕರ್ ಸಮಾರಂಭಕ್ಕೆ ರಾಮ್ ಚರಣ್ ಜೊತೆಗೆ ಉಪಾಸನಾ ಕೂಡ ಹೋಗಿದ್ದು ಗೊತ್ತೇ ಇದೆ. ಈ ಸಮಾರಂಭದಲ್ಲಿ ಚರಣ್ ಮತ್ತು ಉಪಾಸನಾ ವಿಶೇಷ ವಿನ್ಯಾಸದ ಉಡುಗೆಯೊಂದಿಗೆ ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಈ ಸಮಾರಂಭಕ್ಕೆ ತಯಾರಿ ನಡೆಸುತ್ತಿರುವಾಗಲೇ ಅಮೆರಿಕದ ಪ್ರಮುಖ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಚರಣ್ ತಾವು ಧರಿಸುವ ಡ್ರೆಸ್ ನ ವಿಶಿಷ್ಟತೆ ಹಾಗೂ ಭಾರತೀಯ ವಿನ್ಯಾಸಕರ ಬಗ್ಗೆ ಮಾತನಾಡಿದ್ದಾರೆ.

ಅದೇ ಸಂದರ್ಶನದಲ್ಲಿ ಸೀತಾರಾಮನ ಚಿಕ್ಕ ಮೂರ್ತಿಗಳನ್ನು ತೋರಿಸುತ್ತಾ.. “ಜಗತ್ತಿನಲ್ಲಿ ಎಲ್ಲಿಗೆ ಹೋದರೂ, ನನ್ನ ಪತ್ನಿ ಮತ್ತು ನಾನು ಈ ವಿಗ್ರಹಗಳನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೇವೆ. ಈ ಸಣ್ಣ ದೇವಾಲಯವು ನಮ್ಮ ಸಂಪ್ರದಾಯ ಮತ್ತು ದೇಶದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ” ಎಂದು ನಾವು ನಂಬುತ್ತೇವೆ ಎಂದರು. ಇತ್ತೀಚೆಗಷ್ಟೇ ಅಮೆರಿಕದ ಸಂದರ್ಶನವೊಂದರಲ್ಲಿ ಅಯ್ಯಪ್ಪ ದೀಕ್ಷೆಯ ಹಿರಿಮೆಯನ್ನೂ ಹೇಳಿದ್ದರು ರಾಮ್ ಚರಣ್. ತಮ್ಮ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವುದಲ್ಲದೆ ನಮ್ಮ ಸಂಸ್ಕೃತಿಯನ್ನು ಇತರ ದೇಶಗಳಿಗೂ ತಿಳಿಸುತ್ತಿರುವ ಚರಣ್ ಅವರನ್ನು ಅಭಿಮಾನಿಗಳು ಮೆಚ್ಚುಗೆಯ ಮಳೆ ಹರಿಸುತ್ತಿದ್ದಾರೆ.

ಇನ್ನು ರಾಮ್ ಚರಣ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಶಂಕರ್ ನಿರ್ದೇಶನದಲ್ಲಿ ಆರ್ ಸಿ 15 ಸಿನಿಮಾ ಮಾಡುತ್ತಿದ್ದಾರೆ. ಈ ಪೊಲಿಟಿಕಲ್ ಡ್ರಾಮಾ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಇದೇ ತಿಂಗಳ 27 ರಂದು ರಾಮ್ ಚರಣ್ ಹುಟ್ಟುಹಬ್ಬ ಇರುವುದು ಗೊತ್ತೇ ಇದೆ. ಅಂದು ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ದಿಲ್ ರಾಜು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!