Tuesday, March 28, 2023

Latest Posts

ಮಹಾದ್ಭುತ! ಅವಶೇಷಗಳಡಿಯಿಂದ 21ದಿನಗಳ ಬಳಿಕ ಹೊರಬಂದ ಕುದುರೆ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿಯಲ್ಲಿ ಪ್ರಬಲ ಭೂಕಂಪವು ಸಾವಿರಾರು ಜನರನ್ನು ಬಲಿಪಡೆದುಕೊಂಡಿದೆ. ಕೆಲವರು ದಿನಗಟ್ಟಲೆ ಊಟ, ನೀರಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಮತ್ತೊಂದು ಪವಾಡ ಸಂಭವಿಸಿದೆ. 21 ದಿನಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಕುದುರೆಯೊಂದು ಬದುಕುಳಿದಿದೆ.

ಆದಿಮಾನ್ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದಿದ್ದು ಅವಶೇಷಗಳಡಿಯಲ್ಲಿ ಕುದುರೆ ಸಿಕ್ಕಿಬಿದ್ದಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆಗೆಯುತ್ತಿದ್ದಾಗ ಕುದುರೆ ಅವರ ಕಣ್ಣಿಗೆ ಬಿತ್ತು. ಜೀವಂತವಾಗಿರುವುದು ಆಶ್ಚರ್ಯಕರವಾಗಿತ್ತು. ಕೂಡಲೇ ಅವಶೇಷಗಳಡಿಯಲ್ಲಿ ಜೀವಂತವಾಗಿದ್ದ ಕುದುರೆಯನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇದು ನಿಜಕ್ಕೂ ವಿಶ್ವ ವಿಸ್ಮಯ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!