ನಿರ್ಮಾಪಕನಿಂದ 56 ಲಕ್ಷ ಸಾಲ ಪಡೆದು ವಂಚಿಸಿದ್ರಾ ರಾಮ್‌ ಗೋಪಾಲ್‌ ವರ್ಮಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಮಾ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ರಾಮ್ ಗೋಪಾಲ್ ವರ್ಮಾ ತಮ್ಮ ಪ್ರೊಡಕ್ಷನ್ ಹೌಸ್‌ ನಿಂದ 56 ಲಕ್ಷ ಸಾಲ ಪಡೆದು ವಂಚಿಸಿದ್ದಾಗಿ ನಿರ್ಮಾಪಕರೊಬ್ಬರು ಸಲ್ಲಿಸಿದ  ದೂರಿನನ್ವಯ ಹೈದರಾಬಾದ್‌ನ ಮಿಯಾಪುರ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ದೂರುದಾರರು ಅವರ ಸ್ನೇಹಿತರ ಮೂಲಕ ರಾಮ್ ಗೋಪಾಲ್ ವರ್ಮಾ ಅವರನ್ನು 2019 ರಲ್ಲಿ ಅವರನ್ನು ಭೇಟಿಯಾಗಿದ್ದರು. ಅದಾದ ಮೇಲೆ 2020 ರಲ್ಲಿ ತೆಲುಗು ಚಿತ್ರ ‘ದಿಶಾ’ ಗಾಗಿ 8 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು. ನಂತರ ಜನವರಿ 22, 2020 ರಂದು ಚೆಕ್ ಮೂಲಕ 20 ಲಕ್ಷ ಕೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಹಣವನ್ನು ಆರು ತಿಂಗಳೊಳಗೆ ಮರುಪಾವತಿ ಮಾಡುವ ಭರವಸೆ ನೀಡಿದ್ದರು. ನಂತರ ಫೆಬ್ರವರಿ 2020 ರ ಎರಡನೇ ವಾರದಲ್ಲಿ, ವರ್ಮಾ ತಮ್ಮ ಚಲನಚಿತ್ರ ನಿರ್ಮಾಣದಲ್ಲಿ ಹಣಕಾಸಿನ ಅಗತ್ಯತೆಗಳನ್ನು ಉಲ್ಲೇಖಿಸಿ ಇನ್ನೂ 28 ಲಕ್ಷ ರೂ. ಪಡೆದುಕೊಂಡರು. ಆ ಸಂದರ್ಬದಲ್ಲಿ ವರ್ಮಾ ‘ದಿಶಾ’ ಚಿತ್ರದ ಬಿಡುಗಡೆಗೆ ಮೊದಲು 56 ಲಕ್ಷ ರೂ.ಗಳನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ದೂರುದಾರರಿಗೆ ವರ್ಮಾ ಅವರು ದಿಶಾ ಚಿತ್ರದ ನಿರ್ಮಾಪಕರಲ್ಲ ಎಂಬ ವಿಚಾರ ತಡವಾಗಿ ತಿಳಿದುಬಂದಿದೆ. ಸುಳ್ಳು ಹೇಳಿ ತಮಗೆ ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಿರ್ಮಾಪಕರ ದೂರು, ಆರೋಪಗಳ ಕುರಿತಾಗಿ ಆರ್‌ ಜಿವಿ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!