ಸುಡಾನ್‌ ಕೋರ್ಟ್‌ನಿಂದ ವಿಚಿತ್ರ ತೀರ್ಪು, ಕುರಿಗೆ ಮೂರು ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಫ್ರಿಕಾದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ಕುರಿಯೊಂದಕ್ಕೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣ ಸುಡಾನ್‌ನ 45 ವರ್ಷದ ಅಡುಯು ಚಾಪಿಂಗ್ ಎಂಬ ಮಹಿಳೆಯನ್ನು ಕುರಿ ಗುದ್ದಿ ಸಾಯಿಸಿದೆ. ಮಹಿಳೆಯನ್ನು ನೆಲಕ್ಕೆ ಕೆಡವಿ ತನ್ನ ಕೊಂಬುಗಳಿಂದ ತಿವಿದು, ತಲೆಯಿಂದ ಡಿಚ್ಚಿ ಹೊಡೆದಿದೆ. ಪರಿಣಾಮ ಮಹಿಳೆ ಕೋಮಾ ತಲುಪಿ, ನಂತರ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿ ರಾಮ್‌ ಎಂಬ ವ್ಯಕ್ತಿಗೆ ಸೇರಿದ್ದು, ಸಾವನ್ಪ್ಪಿದ ಮಹಿಳೆ ಕೂಡ ಇವರ ಸಂಬಂಧೀಕರೇ ಆಗಿದ್ದಾರೆ. ಘಟನೆ ಬಳಿಕ ಪೊಲೀಸರು ಕುರಿ ಮತ್ತ ಅದರ ಮಾಲೀಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವಿಚಿತ್ರ ಘಟನೆಯ ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಳೆ ಸಾವಿಗೆ ಕಾರಣವಾದ ಕುರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕುರಿಮರಿ ಮಾಲೀಕನು ತಪ್ಪಿತಸ್ಥನಲ್ಲ ಎಂದು ತೀರ್ಪು ನೀಡಿದೆ.

ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ ಐದು ಹಸುಗಳನ್ನು ನೀಡುವಂತೆ ಕುರಿ ಮಾಲೀಕರಿಗೆ ನ್ಯಾಯಾಲಯ ಆದೇಶಿಸಿದೆ. ಕುರಿಯನ್ನು ದಕ್ಷಿಣ ಸುಡಾನ್‌ನ ಲೇಕ್ ಸ್ಟೇಟ್‌ನ ಅಡುಲ್ ಕೌಂಟಿಯಲ್ಲಿರುವ ಮಿಲಿಟರಿ ಶಿಬಿರದಲ್ಲಿ ಮೂರು ವರ್ಷಗಳವರೆಗೂ ಇರುವಂತೆ ಶಿಕ್ಷೆ ವಿಧಿಸಲಾಯಿತು. ದಕ್ಷಿಣ ಸುಡಾನ್ ಕಾನೂನಿನ ಪ್ರಕಾರ, ಮೂರು ವರ್ಷಗಳ ಬಳಿಕ ಕುರಿಮರಿಯನ್ನು ಮಾಲೀಕನ ಕುಟುಂಬಕ್ಕೆ ನೀಡಲಾಗುವುದು ಎಂದು ಕೋರ್ಟ್‌ ಆದೇಶಿಸಿದೆ. ಈ ವಿಚಿತ್ರ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!