ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಜನ ಬರ್ತಾರೆ ಎಂಬ ಮಾತನ್ನು ಸುಳ್ಳಾಗಿಸಿದ ರಿಷಬ್: ರಾಮ್ ಗೋಪಾಲ್ ವರ್ಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ…ಕಾಂತಾರ…ಕಾಂತಾರ, ಎಲ್ಲೆಡೆ ಈಗ ಈ ಸಿನಿಮಾದ್ದೇ ಸುದ್ದಿ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಕಾಂತಾರ ಹಿಂದಿಯಲ್ಲಿ ಅಬ್ಬರಿಸುತ್ತಿದೆ.

ಎಲ್ಲಾ ಭಾಷೆಗಳಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದೀಗ ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ನಿರ್ದೇಶಕ ಖ್ಯಾತಿಯ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ.

‘ಕೇವಲ ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಜನ ಬರ್ತಾರೆ ಎನ್ನುವುದನ್ನು ರಿಷಬ್ ಶೆಟ್ಟಿ ಅವರು ನಾಶಮಾಡಿದ್ದಾರೆ. ಮುಂದಿನ ದಶಕದ ವರೆಗೂ ಕಾಂತಾರ ಸಿನಿಮಾ ದೊಡ್ಡ ಪಾಠ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಈಗ ರಿಷಬ್ ಶೆಟ್ಟಿ ಶಿವ. ಕಾಂತಾರ ಕಲೆಕ್ಷನ್ ನಿಂದ ವಿಲನ್ ಗಳಾದ 300, 400, 500 ಕೋಟಿ ಸಿನಿಮಾ ಮೇಕರ್ಸ್‌ಗೆ ಹೃದಯಾಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿಗೆ ಧನ್ಯವಾದಗಳು. ಶಿವ ಹೇಗೆ ದೈವದ ಗೂಳಿಗೆ ಎಚ್ಚೆತ್ತುಕೊಳ್ಳುತ್ತಿದ್ದನೋ ಹಾಗೆ ಈಗ ಕಾಂತಾರ ಕಲೆಕ್ಷನ್‌ನಿಂದ ಎಲ್ಲಾ ದೊಡ್ಡ ದೊಡ್ಡ ಬಜೆಟ್ ಚಿತ್ರದ ತಯಾರಕರು ಹಠಾತ್ತನೆ ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಿದ್ದಾರೆ.

ಇದೇ ವೇಳೆ ರಿಷಬ್ ಶೆಟ್ಟಿಯ ಸಂದರ್ಶನ ಶೇರ್ ಮಾಡಿ, ‘ಈ ಸಂದರ್ಶನ ನೋಡಲೇ ಬೇಕು. ಕಾಂತಾರ ಸಿನಿಮಾ ಮೂಡಿಬಂದಿದ್ದು ಸರಳತೆ ಮತ್ತು ಮುಗ್ದತೆಯಿಂದನೇ ಹೊರತು ಅತಿಯಾದ ಯೋಚನೆಯಿಂದ ಅಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಸಾಬೀತು ಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!