ರಾಮಜನ್ಮಭೂಮಿ ಉತ್ಖನನದ ರೂವಾರಿ ಬಿಬಿ ಲಾಲ್‌ ನಿಧನ: ಪ್ರಧಾನಿ ಮೋದಿ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪುರಾತತ್ವ ಶಾಸ್ತ್ರಜ್ಞರಾಗಿ ರಾಮಜನ್ಮಭೂಮಿ ಉತ್ಖನನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಷ್ಠ ಪುರಾತಜ್ಞ ಬಿಬಿ ಲಾಲ್‌ ಇಹಲೋಕ ತ್ಯಜಿಸಿದ್ದಾರೆ. ಪುರಾತತ್ವಶಾಸ್ತ್ರಜ್ಞ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ತಮ್ಮ 101ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಿಬಿ ಲಾಲ್‌ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಹಾನಿರ್ದೇಶಕರಾಗಿದ್ದರು ಮತ್ತು ಈಗ ರಾಮ ಮಂದಿರವಿರುವ ಅಯೋಧ್ಯೆಯ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ದೇವಾಲಯದ ಕಂಬಗಳಂತಹ ರಚನೆಗಳಿರುವುದನ್ನು ಪತ್ತೆ ಹಚ್ಚಿದ್ದರು. ಆ ಮೂಲಕ ಇತಿಹಾಸದಿಂದ ಮರೆಯಾಗಿದ್ದ ಸತ್ಯವನ್ನು ಜಗತ್ತಿನೆದುರು ಹೊರಬರಲು ಕಾರಣರಾಗಿದ್ದರು. ಒಂದು ಶತಮಾನಗಳ ಕಾಲ ಜೀವಿಸಿದ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಬಿಬಿ ಲಾಲ್‌ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು ಶ್ರೀ ಬಿ.ಬಿ.ಲಾಲ್ ಅವರದು ಅಸಾಧಾರಣ ವ್ಯಕ್ತಿತ್ವ. ಸಂಸ್ಕೃತಿ ಮತ್ತು ಪುರಾತತ್ತ್ವ ಶಾಸ್ತ್ರಕ್ಕೆ ಅವರ ಕೊಡುಗೆಗಳು ಅಪ್ರತಿಮವಾಗಿವೆ. ಅವರು ನಮ್ಮ ಶ್ರೀಮಂತ ಗತಕಾಲದೊಂದಿಗಿನ ನಮ್ಮ ಸಂಪರ್ಕವನ್ನು ಆಳಗೊಳಿಸಿದ ಮಹಾನ್ ಬುದ್ಧಿಜೀವಿ ಎಂದು ಸದಾ ನೆನಪಿಸಿಕೊಳ್ಳಲಾಗುತ್ತದೆ. ಅವರ ನಿಧನದಿಂದ ನೋವಾಗಿದೆ. ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದೆ. ಓಂ ಶಾಂತಿ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆಯೂ ಕೂಡ ಟ್ವಿಟರ್‌ನಲ್ಲಿ ಲಾಲ್‌ಗೆ ಗೌರವ ಸಲ್ಲಿಸಿದೆ. “ಅವರು ಹೋಗಿರಬಹುದು ಆದರೆ ಅವರ ಕೆಲಸವು ಜೀವಂತವಾಗಿದೆ ಮತ್ತು ಮುಂದಿನ ಪೀಳಿಗೆಗೆ ಕಲಿಸಲು ಮತ್ತು ಪ್ರಭಾವಿಸಲು ಮುಂದುವರಿಯುತ್ತದೆ” ಎಂದು ಅದು ಟ್ವೀಟ್‌ ನಲ್ಲಿ ಬರೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!