Tuesday, February 27, 2024

ಅಮೆರಿಕೆಯಲ್ಲೂ ರಾಮ ಜಪ: ದೇಗುಲಗಳ ಮುಂದೆ ಮೊಳಗಿತು ಜೈ ಶ್ರೀರಾಮ್, ಜೈ ಶ್ರೀರಾಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇವಲ ಭಾರತ ಮಾತ್ರವಲ್ಲ ವಿಶ್ವಕ್ಕೆ ವಿಶ್ವವೇ ರಾಮಲಲಾನ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ.
ಅತ್ತ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಲೋಕಾರ್ಪಣೆಗೆ ಸಜ್ಜಾಗುತ್ತಿದ್ದರೆ ಇತ್ತ ಅಮೆರಿಕೆಯ ಹಾದಿ ಹಾದಿಗಳಲ್ಲಿಯೂ ಈಗ ಭಗವಾಧ್ವಜ ರಾರಾಜಿಸುತ್ತಿದೆ.

ಅಮೆರಿಕದ ಹಿಂದು ಸಮುದಾಯ ಬೃಹತ್ ಕಾರು ರ್‍ಯಾಲಿ ನಡೆಸುವ ಮೂಲಕ ರಾಮಲಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವಂತೆ ಅಮೆರಿಕದ ಹಿಂದು ಸಮುದಾಯಗಳಿಗೆ ಆಹ್ವಾನ ನೀಡಿದ್ದಾರೆ.

ಭಗವಾಧ್ವಜ, ಭಾರತ-ಅಮೆರಿಕ ಧ್ವಜ, ಕೇಸರಿ ಬ್ಯಾನರ್‌ಗಳ ಜೊತೆಗೆ ರಾಮ ಮಂದಿರದ ಚಿತ್ರಗಳನ್ನು ಹಿಡಿದ 500 ಕ್ಕೂ ಅಧಿಕ ಮಂದಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದು, ಅಮೆರಿಕೆಯ 11 ದೇಗುಲಗಳ ಎದುರು ಕಾರುಗಳನ್ನು ನಿಲ್ಲಿಸಿ ಭಜನೆ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಜೊತೆಗೆ ದೇಗುಲದ ಅಧಿಕಾರಿಗಳಿಗೆ ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ವನ್ನೂ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!