ʻಗಾಡ್ ಫಾದರ್ʼ ಚಿತ್ರದ ಇಂಟ್ರೆಸ್ಟಿಂಗ್ ಅಪ್ ಡೇಟ್ಸ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಚಿತ್ರ ‘ಗಾಡ್‌ಫಾದರ್’ ಈಗಾಗಲೇ ಪ್ರೇಕ್ಷಕರಲ್ಲಿ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.  ಈ ಚಿತ್ರವನ್ನು ಮೋಹನ್ ರಾಜಾ ನಿರ್ದೇಶಿಸುತ್ತಿದ್ದು, ಪೊಲಿಟಿಕಲ್ ಥ್ರಿಲ್ಲರ್ ಆಗಿದೆ. ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಗಳು ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಏತನ್ಮಧ್ಯೆ, ಈ ಚಿತ್ರದ ಮೊದಲ ಸಿಂಗಲ್ ಸಾಂಗ್ ಇಂದು ಸಂಜೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಈ ಚಿತ್ರದ ಬಗ್ಗೆ ಖ್ಯಾತ ಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಒಂದು ಕುತೂಹಲಕಾರಿ ಅಪ್ಡೇಟ್ ಅನ್ನು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದ ಹಾಡುಗಳು ಅದ್ಭುತವಾಗಿದ್ದು, ತಮನ್ ಸಂಗೀತ ತುಂಬಾ ಚೆನ್ನಾಗಿದೆ. ಅದರಲ್ಲೂ ಹಿನ್ನೆಲೆ ಸಂಗೀತ ಬೇರೆ ಲೆವೆಲ್‌ನಲ್ಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸಿನಿಮಾದಲ್ಲಿ ನಯನತಾರಾ, ಸತ್ಯದೇವ್ ಮತ್ತು ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಪ್ರಮುಖ ಮುಖ್ಯ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರವನ್ನು ದಸರಾ ಉಡುಗೊರೆಯಾಗಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದ್ದು, ಈ ಚಿತ್ರದ ಮೊದಲ ಸಿಂಗಲ್ ಸಾಂಗ್ ಇಂದು ಸಂಜೆ 7.02ಕ್ಕೆ ಬಿಡುಗಡೆಯಾಗುತ್ತಿದೆ. ಈ ಹಾಡು ಯಾವ ರೀತಿಯ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ ನೋಡೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!