Wednesday, December 6, 2023

Latest Posts

ರಸ್ತೆ ಗುಂಡಿ ಮುಚ್ಚುವಂತೆ ಕೆಸರಿನಲ್ಲಿ ಉರುಳು ಸೇವೆ: ಪ್ರತಿಭಟನೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ವಿನೂತನ ಪ್ರತಿಭಟನೆ ನಡೆಸಿದರು. ಉಡುಪಿಯಲ್ಲಿನ ರಸ್ತೆಗಳಿಗೆ ಪೂಜೆ ಸಲ್ಲಿಸಿದ್ದಲ್ಲದೆ, ಉರುಳು ಸೇವೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ರಾಜ್ಯದಲ್ಲಿ ಭಾರೀ ಮಳೆಯಿಂದ ಎಲ್ಲಿ ನೋಡಿದರೂ ರಸ್ತೆಗಳು ಗುಂಡಿಮಯವಾಗಿವೆ. ಈ ರಸ್ತೆಗಳತ್ತ ಸರ್ಕಾರ, ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ನಿತ್ಯಾನಂದ ವೊಳಕಾಡು ಎಂಬ ಸಾಮಾಜಿಕ ಕಾರ್ಯಕರ್ತ ರಸ್ತೆಗಳ ದುರಸ್ತಿಗೆ ಪ್ರತಿಭಟನೆ ಆರಂಭಿಸಿದರು.

ಉಡುಪಿಯ ಇಂದ್ರಾಳಿ ರೈಲ್ವೆ ಸೇತುವೆ ಬಳಿಯ ರಸ್ತೆಗಳಲ್ಲಿನ ಗುಂಡಿಗಳಿಗೆ  ಹಾರತಿ ಬೆಳಗಿ ಅಲ್ಲಿನ ಕೆಸರುಮಯ ರಸ್ತೆಯಲ್ಲಿ ಉರುಳು ಸೇವೆ ಕೈಗೊಂಡರು.  ಅಲ್ಲಿದ್ದವರು ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!