ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟ ಅಶೋಕ್ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಶೋಕ್ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಫೋಟೊ ವೈರಲ್ ಆಗಿದೆ.
ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ದಿನಗಳಿಂದ ಅಶೋಕ್ ಕಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪ್ಡೇಟ್ ಇರಲಿಲ್ಲ.
ಇದೀಗ ಅವರೇ ಪೋಸ್ಟ್ ಒಂದನ್ನು ಮಾಡಿದ್ದು, ತುಂಬಾ ದಿನದಿಂದ ಒಂದೂ ಪೋಸ್ಟ್ ಇಲ್ಲ ಎಂದು ಕೇಳುತ್ತಿದ್ರಿ, ನಿಮೋನಿಯಾದಿಂದ ಬಳಲುತ್ತಿದ್ದೇನೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಈಗ ಆರೋಗ್ಯ ಸುಧಾರಿಸಿದೆ. ಮನೆಯವರ ಹರಕೆ ಹಾರೈಕೆ ಹಾಗೂ ನಿಮ್ಮೆಲ್ಲರ ಪ್ರೀತಿ ನನ್ನ ಆರೋಗ್ಯ ಸುಧಾರಿಸಿದೆ. ಎಲ್ಲರೂ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಆರೋಗ್ಯವೇ ಭಾಗ್ಯ. ಚೆನ್ನಾಗಿ ನೀರು ಕುಡಿಯಿರಿ ಎಂದು ಹೇಳಿದ್ದಾರೆ.