ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅದಿತಿ ಪ್ರಭುದೇವ ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದಾರೆ. ಯುಗಾದಿ ಹಬ್ಬದಂದು ಮಹಾಲಕ್ಷ್ಮಿ ಆಗಮನದ ಬಗ್ಗೆ ನಟಿ ಗುಡ್ ನ್ಯೂಸ್ ನೀಡಿದ್ದಾರೆ.
ಏಪ್ರಿಲ್ 4ರಂದೇ ಹೆಣ್ಣುಮಗುವಿಗೆ ಜನ್ಮ ನೀಡಿರುವ ನಟಿಯು, ಯುಗಾದಿಯಂದು ತಮ್ಮ ಇನ್ಸ್ಟಾ ಖಾತೆಯ ಮೂಲಕ ಮಗುವಿನ ಜನನದ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕೈ ತಾನು ಹಾಗೂ ಪತಿ ಯಶಸ್ ಕೈ ಮೇಲಿರುವ ಚಿತ್ರ ಹಂಚಿಕೊಂಡಿರುವ ನಟಿ, ‘ನಮ್ಮನೆ ಮಹಾಲಕ್ಷ್ಮಿ’ ಎಂದು ಬರೆದುಕೊಂಡಿದ್ದು, ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.