Thursday, July 7, 2022

Latest Posts

ರಾಮನಗರ ಜಿಲ್ಲೆಯನ್ನು ʼಅಪ್ಪ- ಮಕ್ಕಳುʼ ಜಹಗೀರಾಗಿಸಿಕೊಂಡಿದ್ದಾರಾ: ಸಚಿವ ಅಶ್ವತ್ಥನಾರಾಯಣ ಪ್ರಶ್ನೆ

ಹೊಸದಿಗಂತ ವರದಿ, ರಾಮನಗರ
ಕುಮಾರಸ್ವಾಮಿ ಮತ್ತು ದೇವೇಗೌಡರು ರಾಮನಗರ ಜಿಲ್ಲೆಯನ್ನು ತಮ್ಮ ವಂಶಕ್ಕೆ ಕುಟುಂಬ ರಾಜಕಾರಣಕ್ಕೆ ಜಹಗೀರು ಮಾಡಿಕೊಂಡಿದ್ದಾರೆಯೇ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.
ರಾಮನಗರದ ರಾಯರದೊಡ್ಡಿ ಸರ್ಕಲ್ ನಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವ ಕುಟುಂಬ ರಾಜಕಾರಣಕ್ಕೂ ಮನ್ನಣೆ ನೀಡದೇ ಈ ಬಾರಿ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿ. ಆ ಮೂಲಕ ಈ ಭಾಗದ ನಾಲ್ಕು ತಾಲೂಕುಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss