ಹೊಸದಿಗಂತ ವರದಿ,ಚಿತ್ರದುರ್ಗ :
ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ನಮ್ಮ ಬಹು ಸಂಖ್ಯಾತ ಹಿಂದುಗಳಿಗೆ ಅವಶ್ಯ ಜೀವನ ಪದ್ದತಿಯಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದಿಂದ ಆಯೋಧ್ಯಗೆ ಹೋಗುವ ರಾಮ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ನರೇಂದ್ರ ಮೋದಿಯವರ ಆಪೇಕ್ಷೆಯಂತೆ ಆಯೋಧ್ಯಯ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಿದ್ದಾರೆ. ಕರ್ನಾಟಕದಿಂದ 35 ಸಾವಿರ ಮಂದಿಯನ್ನು ರಾಮನ ದರ್ಶನಕ್ಕೆ ಕಳುಹಿಸಲಾಗುತ್ತಿದೆ. ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ. ಆದರೆ ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿದೆ ಮದರು.
ಚಿತ್ರದುರ್ಗದಿಂದ ಹೊಗುತ್ತಿರುವ 415 ರಾಮ ಭಕ್ತಾಧಿಗಳಿಗೆ ರಾಮನ ದರ್ಶನವಾಗುತ್ತದೆ. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟವನ್ನು ಮಾಡಿದ್ದಾರೆ. ದೇಶದಲ್ಲಿ ಹಲವಾರು ಜನತೆ ತಮ್ಮ ಪ್ರಾಣವನ್ನು ನೀಡಿದ್ದಾರೆ. ರಾಮಂದಿರ ಕಾಶಿ ಮತ್ತು ಮಧುರ ಈ ದೇಶದ ಬಹಸಂಖ್ಯಾತರ ಅಸ್ಮಿತೆ, ಕೋಟ್ಯಾಂತರ ಜನತೆ ಕನಸು ರಾಮ ರಾಜ್ಯವನ್ನು ನಿರ್ಮಾಣ ಮಾಡಬೇಕು, ರಾಮ ರಾಜ್ಯದ ಕನಸು ನನಸಾಗಬೇಕಾದರೆ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಮೋದಿಯವರ ಕನಸಾಗಿತ್ತು ಎಂದು ಹೇಳಿದರು.
ವಿಶ್ವ ಭಾರತದ ಸಾದನೆಯನ್ನು ಕೊಡಾಡಿದೆ. ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ನಮ್ಮ ಬಹು ಸಂಖ್ಯಾತ ಹಿಂದುಗಳಿಗೆ ಅವಶ್ಯ ಜೀವನ ಪದ್ದತಿಯಾಗಿದೆ. ಹಿಂದು ನೆಲೆಗಟ್ಟಿನ ಭಾರತಕ್ಕೆ ಬಹು ಸಂಖ್ಯಾತರಿಗೆ ಇತರೆ ಧರ್ಮದವರು ಸಹಕಾರವನ್ನು ನೀಡಬೇಕಿದೆ. ೫೦೦ ವರ್ಷಗಳ ಹೋರಾಟಕ್ಕೆ ದಾಸ್ಯದಿಂದ ಮುಕ್ತವಾಗಿದ್ದೇವೆ. ಈ ಕಾರ್ಯವನ್ನು ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ, ದೇಶದಲ್ಲಿ ರಾಮನ ದರ್ಶನಕ್ಕೆ ರೈಲ್ವೆ ಇಲಾಖೆಯವರು, ರಾಷ್ಟ್ರದ ಮೂಲೆ. ಮೂಲೆಗಳಿಂದ ಆಯೋಧ್ಯಗೆ ಹೋಗಲು ರಾಮನ ದರ್ಶನಕ್ಕೆ ಆವಕಾಶವನ್ನು ಮಾಡಿದ್ದಾರೆ ತುಂಬು ಹೃದಯದ ಅಭೀನಂದನೆಗಳು ಎಂದು ನಾರಾಯಣಸ್ವಾಮಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ರಾಮನ ದರ್ಶನ ಪಡೆಯುವುದಕ್ಕೆ ಎಲ್ಲರಿಗೂ ಸಹಾ ಸಂತಸವಾಗಿದೆ. ಜಿಲ್ಲೆಯಿಂದ ಹೋಗುತ್ತಿರುವ ಭಕ್ತಾಧಿಗಳಿಗೆ ಒಳ್ಳೇಯ ದರ್ಶನವಾಗಲಿ, ರಾಮನ ದರ್ಶನದಿಂದ ಬಂದ ಮೇಲೆ ಕನಿಷ್ಠ ೫೦೦ ಮನೆಗಾದರೂ ಶ್ರೀರಾಮನ ಪ್ರಸಾದವನ್ನು ತಲುಪಿಸುವ ಕಾರ್ಯವನ್ನು ಮಾಡಿ ಶ್ರೀರಾಮ ಆದರ್ಶ ಮತ್ತು ತತ್ವಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ಅಳವಡಿಕೆಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಆಯೋಧ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು ಅದು ಈಗ ಪ್ರದಾನ ಮಂತ್ರಿ ನರೇಂಧ್ರ ಮೋಧಿಯವರ ನೇತೃತ್ವದಲ್ಲಿ ನನಸಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಜ.22ರ ಕಾರ್ಯಕ್ರಮವನ್ನು ನಮ್ಮ ದೇಶ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಭಾರತೀಯರು ಸಹಾ ವೀಕ್ಷಣೆಯನ್ನು ಮಾಡಿದ್ದಾರೆ.