Friday, March 1, 2024

ಆಯೋಧ್ಯೆಗೆ ಆಗಮಿಸಿದ ರಾಮಾಯಣದ ‘ಶ್ರೀರಾಮ’: ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 22ರಂದು ರಾಮಲಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ದೇಶದೆಲ್ಲಡೆ ಜೈ ಶ್ರೀರಾಮ ಘೋಷಣೆ ಮೊಳಗುತ್ತಿದೆ.
ಇದೀಗ ಶ್ರೀರಾಮಾಯಣ ಧಾರವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್, ಆಯೋಧ್ಯೆಗೆ ಆಗಮಿಸಿದ್ದಾರೆ.

ಶ್ರೀರಾಮ ಮಂದಿರ ದರುಶನ ಪಡೆಯಲು ಆಯೋಧ್ಯೆಗೆ ಆಗಮಿಸಿದ ರಾಮಾಯಣ ಧಾರವಾಹಿಯ ಶ್ರೀರಾಮನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ಸಾಲು ಗಟ್ಟಿ ನಿಂತ ಜನ ಜೈಶ್ರೀರಾಮ ಘೋಷಣೆಯೊಂದಿಗೆ ಅರುಣ್ ಗೋವಿಲ್ ಸ್ವಾಗತ ಮಾಡಿದ್ದಾರೆ.

ಅರುಣ್ ಗೋವಿಲ್ ಸ್ವಾಗತ ಹಾಗೂ ಆಯೋಧ್ಯೆಯಲ್ಲಿನ ವಾತಾವರಣ ಕುರಿತು ವಿಡಿಯೋ ಭಾರಿ ವೈರಲ್ ಆಗಿದೆ. ಆಯೋಧ್ಯೆಯ ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದೆ. ಅರುಣ್ ಗೋವಿಲ್ ವಿಮಾನದೊಳಗೆ ಕುಳಿತಿರುವ ದೃಶ್ಯಗಳಲ್ಲೂ ಜೈಶ್ರೀರಾಮ್ ಘೋಷಣೆ ಕೇಳುತ್ತಿದೆ.

ಹಲವರು ಅರುಣ್ ಗೋವಿಲ್ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಸೆಲ್ಫಿ ಪಡೆಯಲು ಜನರು ಮುಗಿ ಬಿದ್ದಿದ್ದಾರೆ. ಅರುಣ್ ಗೋವಿಲ್ ಶ್ರೀರಾಮ ಮಂದಿರಕ್ಕೆ ತೆರಳಿ ಆವರಣದಲ್ಲಿರುವ ರಾಮಲಲಾ ದರ್ಶನ ಪಡೆಯಲಿದ್ದಾರೆ.

90ರ ದಶಕದಲ್ಲಿ ರಾಮಾಯಣ ಧಾರಾವಾಹಿಯ ಅತ್ಯಂತ ಜನಪ್ರಿಯ ಧಾರವಾಗಿಯಾಗಿದೆ. ಇಷ್ಟೇ ಅಲ್ಲ ಈ ಧಾರವಾಹಿಯ ಎಲ್ಲಾ ಪಾತ್ರಧಾರಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಾಕ್ಷಾತ್ ದೇವರ ರೀತಿಯಲ್ಲೇ ಜನರು ಸತ್ಕರಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸಿದ್ದ ರಾಮ,ಲಕ್ಷ್ಮಣ ಮತ್ತು ಸೀತೆಯ ಪಾತ್ರಧಾರಿಗಳನ್ನು ಹಲವಾರು ಜನರು ದೇವರಂತೆ ಪೂಜಿಸುತ್ತಿದ್ದರು ಹಲವು ಬಾರಿ ಅರುಣ್ ಗೋವಿಲ್ ವಿಮಾನ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಪಾದ ಮುಟ್ಟಿ ನಮಸ್ಕರಿಸಿದ, ಸಾಷ್ಟಾಂಗ ನಮಸ್ಕಾರ ಮಾಡಿದ ಹಲವು ಘಟನೆಗಳು ನಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!