ಬಾಲಕಿಯ ಗಾಯನಕ್ಕೆ ಮನಸೋತ ಪ್ರಧಾನಿ: ಶಾಲನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ರಾಜಧಾನಿಯಲ್ಲಿ ಪೊಂಗಲ್‌ (Pongal) ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಈ ವೇಳೆ ಗಾಯನ ಪ್ರಸ್ತುತಪಡಿಸಿದ ಬಾಲಕಿಗೆ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾನುವಾರ ಕೇಂದ್ರ ರಾಜ್ಯ ಸಚಿವ ಎಲ್‌.ಮುರುಗನ್‌ ಅವರ ನಿವಾಸದಲ್ಲಿ ಪೊಂಗಲ್‌ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಪೊಂಗಲ್‌ ಆಚರಣೆ ವೇಳೆ ಬಾಲಕಿಯೊಬ್ಬಳು ಗಾಯನ ಪ್ರಸ್ತುತಪಡಿಸಿದ್ದಳು. ನಂತರ ಪ್ರಧಾನಿ ಮೋದಿಯವರ ಕಾಲಿಗೆ ನಮಸ್ಕರಿಸಿದಳು. ಬಾಲಕಿ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿಯವರು ತಮ್ಮ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!