Saturday, April 1, 2023

Latest Posts

ರಮೇಶ್ ಬೈಸ್ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕ‌ : ಇಂದು ನೇಮಕಗೊಂಡ ಎಲ್ಲಾ ರಾಜ್ಯಪಾಲರ ಪಟ್ಟಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆಬ್ರವರಿ 12 ರಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ನಂತರ ರಮೇಶ್ ಬೈಸ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.

ಈ ವೇಳೆ ಅಧ್ಯಕ್ಷ ಮುರ್ಮು ಅವರು ಬಿಹಾರ, ಅಸ್ಸಾಂ, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಿಗೆ ಗವರ್ನರ್ ಹುದ್ದೆಗಳಿಗೆ ಹೊಸ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದ್ದಾರೆ.

ಇಂದು ನೇಮಕಗೊಂಡ ಎಲ್ಲಾ ರಾಜ್ಯಪಾಲರ ಪಟ್ಟಿ :

ಅರುಣಾಚಲಪ್ರದೇಶ ರಾಜ್ಯಪಾಲ: ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕ

ಸಿಕ್ಕಿಂ ರಾಜ್ಯಪಾಲ: ಲಕ್ಷ್ಮಣ್ ಪ್ರಸಾದ್ ಆಚಾರ್ಯ

ಜಾರ್ಖಂಡ್ ರಾಜ್ಯಪಾಲ: ಸಿ.ಪಿ. ರಾಧಾಕೃಷ್ಣನ್

ಹಿಮಾಚಲಪ್ರದೇಶ ರಾಜ್ಯಪಾಲ: ಶಿವಪ್ರತಾಪ್ ಶುಕ್ಲಾ

ಅಸ್ಸಾಂ ರಾಜ್ಯಪಾಲ: ಗುಲಾಬ್ ಚಂದ್ ಕಟಾರಿಯಾ

ಛತ್ತೀಸ್​ಗಡ ರಾಜ್ಯಪಾಲ: ಬಿಸ್ವ ಭೂಸನ್ ಹರಿಚಂದನ್

ಮಣಿಪುರ ರಾಜ್ಯಪಾಲ: ಅನುಸೂಯ ಊಕ್ಯೆ

ನಾಗಾಲೆಂಡ್ ರಾಜ್ಯಪಾಲ: ಲಾ ಗಣೇಸನ್

ಮೇಘಾಲಯ ರಾಜ್ಯಪಾಲ: ಫಾಗು ಚೌಹಾಣ್

ಬಿಹಾರ ರಾಜ್ಯಪಾಲ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್

ಅರುಣಾಚಲ ಕೇಂದ್ರಾಡಳಿತದ ಲೆಫ್ಟಿನೆಂಟ್ ಗವರ್ನರ್: ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

“ಮೇಲಿನ ನೇಮಕಾತಿಗಳು ಅವರು ತಮ್ಮ ತಮ್ಮ ಕಚೇರಿಗಳ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!