Tuesday, August 16, 2022

Latest Posts

ಪುಟ್ಟ ಕ್ರಾಂತಿಕಾರಿ ರಮೇಶ್‌ಚಂದ್ರ ತನ್ನ ಜೀವನದ ಅಮೂಲ್ಯ 18 ವರ್ಷಗಳನ್ನು ಸೆಲ್ಯುಲಾರ್ ಜೈಲಿನಲ್ಲಿ ಕಳೆದ…

ಹೊಸದಿಗಂತ ಡಿಜಿಟಲ್‌ ಡೆಸ್ಕ್ ( ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ಬಂಗಾಳದ ಕ್ರಾಂತಿಕಾರಿ ರಮೇಶ್‌ಚಂದ್ರ ಚಟ್ಟೋಪಾಧ್ಯಾಯರನ್ನು 15ನೇ ವಯಸ್ಸಿಗೆ ಅಂಡಮಾನ್‌ ನ ಜೈಲಿಗೆ ಹಾಕಲಾಯಿತು. ಆ ಬಳಿಕ ರಮೇಶ್‌ಚಂದ್ರ ತಮ್ಮ ಜೀವಿತ ಅಮೂಲ್ಯ ಹದಿನೆಂಟು ವರ್ಷಗಳನ್ನು ಸೆಲ್ಯುಲಾರ್ ಜೈಲಿನಲ್ಲಿ ಸೆರೆವಾಸದಲ್ಲಿ ಕಳೆದರು.
ಬಂಗಾಳದ ಬರಿಶಾಲ್‌ನ ಬನಿಪಿತ್ ಶಾಲೆಯ ವಿದ್ಯಾರ್ಥಿಯಾಗಿದ್ದ ಹುಡುಗ ರಮೇಶ್‌ಚಂದ್ರ ಚಟ್ಟೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾದ ರಸರಂಜನ್ ಸೇನ್ ಅವರಿಂದಾಗಿ ಕ್ರಾಂತಿಕಾರಿ ರಾಷ್ಟ್ರೀಯತೆಯ ಹೋರಾಟಗಳಿತ್ತ ಸೆಳೆಯಲ್ಪಟ್ಟ. ಆ ಅವಧಿಯಲ್ಲಿ ರಸರಂಜನ್ ಸೇನ್ ಅವರ ಹಲವಾರು ವಿದ್ಯಾರ್ಥಿಗಳು ಕ್ರಾಂತಿಕಾರಿಗಳಾಗಿ ರೂಪುಗೊಂಡರು.
ಅದು 1929 ನೇ ಇಸವಿಯ ಮಾರ್ಚ್ 14 ರ ದಿನ.. ಬ್ಯಾರೀಸ್ ಟೌನ್ ನ ಕುಖ್ಯಾತ ಪೊಲೀಸ್ ಅಧಿಕಾರಿ ಹಾಗೂ ಬ್ರಿಟೀಷರ ಸೇವಕ ಇನ್ಸ್‌ಪೆಕ್ಟರ್ ಜ್ಯೋತಿಶ್ಚಂದ್ರ ಬ್ಯಾನರ್ಜಿ ಸಂಜೆ ಏಳು ಗಂಟೆಯ ಸುಮಾರಿಗೆ ತನ್ನ ಕರ್ತವ್ಯ ಮುಗಿಸಿ ಮರಳುತ್ತಿದ್ದ. ಅದೇ ಸಮಯದಲ್ಲಿ ಸದರ್ ಗರ್ಲ್ಸ್ ಶಾಲೆಯ ಹಿಂದಿನ ಲೇನ್‌ನ ಮಂದ ಬೆಳಕಿನಲ್ಲಿ, ಒಬ್ಬ ದುರ್ಬಲ ಪುಟ್ಟ ಹುಡುಗ ಯಾರ ಗಮನಕ್ಕೂ ಬಾರದಂತೆ ಮರೆಯಲ್ಲಿ ಅಡ್ಡಾಡುತ್ತಿದ್ದ. ಇನ್ಸ್‌ಪೆಕ್ಟರ್ ಅವವ ಹತ್ತಿರ ಬಂದ ಕ್ಷಣ, ಜ್ಯೋತಿಶ್ಚಂದ್ರರನ್ನು ಸೈಕಲ್‌ ಸಮೇತ ನೆಲಕ್ಕೆ ತಳ್ಳಿ ಬೀಳಿಸಿ, ಕೈಯ್ಯಲ್ಲಿದ್ದ ಚಾಕುವಿನಿಂದ ಅವನ ಎದೆಗೆ ಆಳವಾಗಿ ಬಗೆದ. ಹುಡುಗನ ಪ್ರತಾಪ ಎಷ್ಟಿತ್ತೆಂದರೆ ಆತನ ದಾಳಿಗೆ ಪೊಲೀಸ್‌ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟ. ಅಷ್ಟರಲ್ಲಿ ಅಲ್ಲಿ ಸೇರಿದ ಸ್ಥಳೀಯರು ಆತ ಸಾವಿಗೆ ಹರ್ಷೋದ್ಘಾರ ಮಾಡಿದರು. ಸ್ಥಳೀಯ ಜನರು, ಸ್ವಾತಂತ್ರ್ಯ ಹೋರಾಟಗಾರರ ಪೀಡಕನಾಗಿದ್ದ ಜ್ಯೋತಿಶ್ಚಂದ್ರನ ಸಾವಿಗೆ ಕಣ್ಣೀರು ಹಾಕುವವರು ಅಲ್ಲಿ ಯಾರೂ ಇರಲಿಲ್ಲ.
ಅಷ್ಟರಲ್ಲಿ ವಿಚಾರ ತಿಳಿದ ಬ್ರಿಟೀಷ್‌ ಪಡೆಗಳು ಅಲ್ಲಿಗೆ ಆಗಮಿಸಿ ಜನಸಮೂಹದ ನಡುವೆಯಿದ್ದ ರಮೇಶ್‌ಚಂದ್ರನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಸಣ್ಣ ಬಾಲಕ ಎಂಬುದನ್ನೂ ಪರಿಗಣಿಸದೆ ನಿರ್ದಯವಾಗಿ ಥಳಿಸಿದರು. 1930 ರಲ್ಲಿ, ಬ್ರಿಟೀಷ್‌ ವಿಚಾರಣಾ ನ್ಯಾಯಾಲಯವು ಮೊದಲಿಗೆ ಆತನಿಗೆ ಬ್ರಿಟೀಷ್‌ ಸಾಮ್ರಾಜ್ಯ ಅಧಿಕಾರಿಯ ಹತ್ಯೆಯಗೆ ಮರಣದಂಡನೆಯನ್ನು ವಿಧಿಸಿತ್ತು. ಆದರೆ ನಂತರ ಅವರ ವಯಸ್ಸನ್ನು ಪರಿಗಣಿಸಿ ಆತನಿಗೆ ಜೀವವಾವಧಿ ಶಿಕ್ಷೆ ವಿಧಿಸಿ ಅಂಡಮಾನ್‌ ನ ಸೆಲ್ಯುಲಾರ್ ಜೈಲಿಗೆ ಅಟ್ಟಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss