ಗರ್ಭಗುಡಿ ಪ್ರವೇಶಿಸಿದ ರಾಮಲಲಾ ವಿಗ್ರಹ, ಇಂದು ಮೂರ್ತಿ ಪ್ರತಿಷ್ಠಾಪನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರಿಯಲ್ಲಿ ಕೆಲವೇ ದಿನಗಳಲಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಈಗಾಗಲೇ ಪ್ರಾಣಪ್ರತಿಷ್ಠೆಗಾಗಿ ಸಕಲ ಸಿದ್ಧತೆಗಳು ನಡೆದಿದ್ದು, ರಾಮಲಲಾ ಮೂರ್ತಿ ಅಯೋಧ್ಯೆ ತಲುಪಿದೆ.

ಇಂದು ರಾಮಲಲಾ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಗಿದ್ದು, ವಿಶೇಷ ಪೂಜೆ ನೆರವೇರಿಸಲಾಗಿದೆ. ಒಟ್ಟಾರೆ ರಾಮಲಲಾ ವಿಗ್ರಹ ೧೫೦-೨೦೦ ಕೆಜಿ ತೂಕ ಇದೆ. ಕ್ರೇನ್ ಸಹಾಯದಿಂದ ಮೂರ್ತಿಯನ್ನು ಸ್ಥಾಪಿಸಲಾಗಿದೆ. ನಿನ್ನೆ ಸಂಜೆಯೇ ದೇಗುಲದ ಆವರಣಕ್ಕೆ ರಾಮಲಲಾ ಮೂರ್ತಿ ಆಗಮಿಸಿತ್ತು.

ಅದ್ಧೂರಿ ಮೆರವಣಿಗೆಯ ಮೂಲಕ ದೇಗುಲದ ಆವರಣಕ್ಕೆ ರಾಮಲಲಾ ಮೂರ್ತಿ ಆಗಮಿಸಿತ್ತು. ಹೂವುಗಳಿಂದ ಅಲಂಕೃತವಾದ ರಾಮಲಲಾಗೆ ವಿಶೇಷ ಪೂಜೆ ನಡೆಸಿ ಪ್ರದಕ್ಷಿಣೆ ಹಾಕಲಾಗಿತ್ತು. ಈ ವೇಳೆ ಎಲ್ಲೆಡೆ ಜೈ ಶ್ರೀ ರಾಮ್ ಉದ್ಘಾರ ಮೊಳಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!