Friday, March 24, 2023

Latest Posts

ಸಾವಿರ ಎಕರೆ ಭೂಮಿಗೆ ನೀರುಣಿಸುವ ʻರಾಮಪ್ಪ ದೇವಾಲಯದ ಕೆರೆʼ: ಕಲೆಯೂ ಅತ್ಯದ್ಬುತ!

ತ್ರಿವೇಣಿ ಗಂಗಾಧರಪ್ಪ

800 ವರ್ಷಗಳಷ್ಟು ಹಳೆಯದಾದ ರಾಮಪ್ಪ ದೇವಾಲಯ ಕಾಕತೀಯರ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ದೇವಾಲಯ ಕಾಕತೀಯ ರಾಜಧಾನಿಯಾದ ವರಂಗಲ್‌ ಪಟ್ಟಣದಿಂದ ಸುಮಾರು 70 ಕಿಮೀ ದೂರದಲ್ಲಿದೆ. ಮುಲುಗು ಜಿಲ್ಲೆಯ ವೆಂಕಟಾಪುರ ಮಂಡಲದ ಪಾಲಂಪೇಟ್ ಪಟ್ಟಣ.ಅದರ ಸಮೀಪ ರಾಮಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಕ್ಕದಲ್ಲಿ ರಾಮಪ್ಪನ ಕೆರೆ ಇದೆ. ಈ ಕೆರೆ ಕಾಕತೀಯರ ಕಾಲದ್ದು, ಇಂದಿಗೂ ಇದೀಗ ಸಾವಿರಾರು ಎಕರೆ ಬೆಳೆಗೆ ಆಧಾರವಾಗಿದೆ. ಈ ಕೆರೆಯ ನೀರೇ ಇಲ್ಲಿನ ರೈತರ ಜೀವನಾಧಾರವಾಗಿದ್ದು, 13-14 ಶತಮಾನಗಳ ನಡುವೆ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಕಾಕತೀಯ ರಾಜ ಗಣಪತಿಯ ಶಾಸನದ ಪ್ರಕಾರ ರಾಚರ್ಲ ರುದ್ರಯ್ಯ ಕಟ್ಟಿದನೆಂದು ಹೇಳಲಾಗುತ್ತದೆ.

ಜೊತೆಗೆ 1213 ರಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಸುಮಾರು 40 ವರ್ಷಗಳನ್ನು ತೆಗೆದುಕೊಂಡಿತು. ಈ ದೇವಾಲಯದ ಗೋಪುರ ನಿರ್ಮಾಣಕ್ಕೆ ಬಳಸಿರುವ ಇಟ್ಟಿಗೆಗಳನ್ನು ನೀರಿನಲ್ಲಿ ಹಾಕಿದರೆ ತೇಲುತ್ತದೆ. ಈ ಸ್ಥಳದ ವಿಶೇಷವೆಂದರೆ ಮಧ್ಯಕಾಲೀನ ಯುಗದ ಈ ಶಿವನ ದೇವಾಲಯದಲ್ಲಿರುವ ದೇವರ ಹೆಸರನ್ನು ಇಡದೆ ಅದನ್ನು ಕೆತ್ತಿಸಿದ ಮುಖ್ಯ ಶಿಲ್ಪಿ ರಾಮಪ್ಪನ ಹೆಸರನ್ನು ಇಡಲಾಗಿದೆ. ಈ ಹೆಸರಿಗೆ ಭಗವಾನ್ ಶಿವನ ಹೆಸರನ್ನೂ ಸೇರಿಸಲಾಗುತ್ತದೆ ಹಾಗಾಗಿಯೇ ಇದನ್ನು ರಾಮಲಿಂಗೇಶ್ವರ ದೇವಾಲಯ ಎಂದೂ ಕರೆಯುತ್ತಾರೆ.

ವಿಷ್ಣುವಿನ ಅವತಾರ ರಾಮ ಮತ್ತು ಶಿವನನ್ನು ಮುಖ್ಯ ದೇವತೆಗಳಾಗಿ ಹೊಂದಿರುವ ದೇವಾಲಯ. ಎತ್ತರದ ಪೀಠದ ಮೇಲೆ ನಕ್ಷತ್ರದ ಆಕಾರದಲ್ಲಿರುವ ಈ ದೇವಾಲಯವು ಕಾಕತೀಯರ ವಿಶೇಷ ಶೈಲಿಯಾಗಿದೆ. ಈ ದೇವಾಲಯವು ಪೂರ್ವಕ್ಕೆ ಎದುರಾಗಿರುವ ಎತ್ತರದ ವೇದಿಕೆಯ ಮೇಲೆ ಗರ್ಭಗುಡಿ ಮತ್ತು ಮೂರು ಬದಿಯ ಮಹಾಮಂಡಪವನ್ನು ಹೊಂದಿದೆ. ಈ ಗರ್ಭಗುಡಿಯಲ್ಲಿ ಎತ್ತರದ ಪೀಠದ ಮೇಲೆ ನಯವಾದ ಕಪ್ಪು ಕಲ್ಲಿನಿಂದ ಕೆತ್ತಿದ ದೊಡ್ಡ ಶಿವಲಿಂಗವಿದೆ. ಈ ಮಹಾಮಂಟಪದ ಮಧ್ಯ ಭಾಗದಲ್ಲಿ ಗೋಡೆಯ ಕಂಬಗಳು ರಾಮಾಯಣ, ಪುರಾಣ ಮತ್ತು ಇತಿಹಾಸದ ಕಥೆಗಳಿಂದ ತುಂಬಿದ ಸುಂದರವಾದ ಶಿಲ್ಪಗಳನ್ನು ಹೊಂದಿದೆ.

ದೇವಾಲಯದ ಆವರಣದಲ್ಲಿರುವ ನಂದಿ ಮಂಟಪ, ಕಾಮೇಶ್ವರ, ಕಾಟೇಶ್ವರ ಮತ್ತು ಇತರ ದೇವಾಲಯಗಳು ನೋಡಲು ಯೋಗ್ಯವಾಗಿವೆ. ಈ ದೇವಾಲಯವು ಆಗಾಗ್ಗೆ ದಾಳಿಗೆ ಒಳಗಾಗಿದೆ. 17 ನೇ ಶತಮಾನದಲ್ಲಿ ಸಂಭವಿಸಿದ ಭೂಕಂಪದಿಂದಲೂ ನಾಶವಾಗಿದೆ. ಅಂದಿನಿಂದ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇದನ್ನು ಸ್ವಾಧೀನಪಡಿಸಿಕೊಂಡಿ ರಕ್ಷಿಸುತ್ತಿದೆ.

ರಾಮಪ್ಪ ದೇವಸ್ಥಾನದಲ್ಲಿ ಶಿಲ್ಪಕಲಾ ಚಾತುರ್ಯ
ರಾಮಪ್ಪಗುಡಿ ದೇವಸ್ಥಾನದ ನಿರ್ಮಾಣದಲ್ಲಿನ ಚಿತ್ರ ಕೌಶಲ್ಯ ಮತ್ತು ಶಿಲ್ಪಕಲಾ ಕೌಶಲ್ಯ ವರ್ಣನಾತೀತ. ವಿಗ್ರಹಗಳ ಬೆಳ್ಳಿಯ ಅಲಂಕಾರ ಮತ್ತು ಅವುಗಳ ತ್ರಿಭಂಗಿ ನೃತ್ಯ ಭಂಗಿಗಳು ಆಕರ್ಷಿಸುತ್ತವೆ. ದೇವಾಲಯದ ಕಂಬಗಳ ಮೇಲೆ ನೃತ್ಯ ಭಂಗಿಗಳು ಮತ್ತು ಸಂಗೀತ ವಾದ್ಯಗಳ ಸಾಲುಗಳಿವೆ. ಜಯಣ್ಣ ಸೇನಾನಿ ವಿರಚಿತ ನೃತ್ತರತ್ನಾವಳಿಯಲ್ಲಿ ಚಿತ್ರಿಸಿರುವ ಎಲ್ಲ ನೃತ್ಯ ಶಿಲ್ಪಗಳು ರಾಮಪ್ಪನ ದೇವಸ್ಥಾನದಲ್ಲಿ ಕುಣಿಯುತ್ತಿವೆ.ಈ ದೇವಾಲಯದಲ್ಲಿನ ಶಿಲ್ಪದ ವಿಶಿಷ್ಟತೆಯನ್ನು ತೋರಿಸುವ ಮತ್ತೊಂದು ವಿಸ್ಮಯವೆಂದರೆ ಏಳು ಧ್ವನಿಗಳನ್ನು ಉಚ್ಚರಿಸುವ ಶಿಲ್ಪ. ಮುಖ್ಯ ದೇವಾಲಯವು ನಕ್ಷತ್ರಾಕಾರದ ಪೀಠದಲ್ಲಿದೆ. 526 ಕೆತ್ತಿದ ಆನೆಯ ವಿಗ್ರಹಗಳು ದೇವಾಲಯವನ್ನು ಸುತ್ತುವರೆದಿವೆ. ಗೋಪಿಕೆಯರ ವಸ್ತ್ರಾಪಹರಣದಿಂದ ಹಿಡಿದು ನರಕಾಸುರನ ವಧೆಯವರೆಗಿನ ಅನೇಕ ಕಥೆಗಳನ್ನು ಈ ಕಲ್ಲಿನ ಕಂಬಗಳ ಮೇಲೆ ಕಾಣಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!