ಅಭಿಮಾನಿಗಳ ಅತಿರೇಕಕ್ಕೆ ರಮ್ಯಾ ಅಸಮಾಧಾನ: ಎಲ್ಲ ಫ್ಯಾನ್ಸ್​​ಗೆ, ನಟರಿಗೆ ಕೊಟ್ರು ಸಲಹೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನಿಮಾ ನಟ-ನಟಿಯರು ಅಂದರೆ ಅಲ್ಲಿ ಅಭಿಮಾನಿಗಳು ಇದ್ದೆ ಇರುತ್ತಾರೆ. ಒಮ್ಮೆ ಒಮ್ಮೆ ಅವರ ನಡವಳಿಕೆ ಅತಿಯಾಗುವುದು ಇದೆ.
ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಅತಿರೇಕಹಲವಾರು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಎಲ್ಲರೂ ಒಂದಾಗಿ ಇರಬೇಕು, ನಾವೆಲ್ಲ ಒಂದೇ ಎಂಬ ಮಂತ್ರವನ್ನು ಜಪಿಸಲಾರಂಭಿಸಿದ್ದಾರೆ.

ಅಭಿಮಾನಿಗಳ ಅತಿರೇಕ ಸೋಷಿಯಲ್ ಮೀಡಿಯಾದಲ್ಲೂ ಕಾಣುತ್ತಿದ್ದು, ಅಂಥ ಕೆಲವು ಪೋಸ್ಟ್​ಗಳ ಸ್ಕ್ರೀನ್​ಶಾಟ್ ಹಂಚಿಕೊಂಡಿರುವ ರಮ್ಯಾ, ಆ ಕೆಲವು ಖಾತೆಗಳನ್ನು ಬ್ಲಾಕ್ ಮಾಡುವಂತೆ ಟ್ವಿಟರ್​​ನವರಿಗೆ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಎಲ್ಲ ಫ್ಯಾನ್ಸ್ ಕ್ಲಬ್​ಗಳಿಗೆ ಕಿವಿಮಾತು ಹೇಳಿದ್ದಾರೆ . ಜೊತೆಗೆ ಸ್ಟಾರ್​ ನಟರೆಲ್ಲರಿಗೂ ಒಂದು ಸಲಹೆ ಕೂಡ ನೀಡಿದ್ದಾರೆ.

‘ಎಲ್ಲಾ ಅಭಿಮಾನಿ ಸಂಘಗಳು ಸಜ್ಜನಿಕೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲ ನಟರು ತಮ್ಮ ಅಭಿಮಾನಿ ಸಂಘಗಳಿಗೆ ಇತರ ನಟರನ್ನು ಅಥವಾ ಯಾರನ್ನಾದರೂ ಟ್ರೋಲ್ ಮಾಡದಂತೆ ಎಚ್ಚರಿಕೆ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.

ಭಿಮಾನಿಗಳು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬೇಡಿ. ಎಲ್ಲಾ ನಿಂದನೆಗಳು ಮತ್ತು ಬೈಗುಳಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಅಂಥ ಕೆಲವು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೋರಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!