Wednesday, November 30, 2022

Latest Posts

‘ಕಾಂತಾರಾ’ ಚಿತ್ರ ವಿಮರ್ಶೆ ಮಾಡಿದ್ರು ರಮ್ಯಾ, ಸಿನಿಮಾ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋಹಕ ತಾರೆ ರಮ್ಯಾ ಇದೀಗ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮ, ಇಂಟರ್ವ್ಯೂ ಎಲ್ಲಾ ಕಡೆ ರಮ್ಯಾ ಇದ್ದೇ ಇರುತ್ತಾರೆ.
ನಿನ್ನೆಯಷ್ಟೇ ಕಾಂತಾರಾ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿದ್ದು, ಇಲ್ಲಿ ಕೂಡ ರಮ್ಯಾ ಕಾಣಿಸಿದ್ದಾರೆ. ಸಿನಿಮಾ ನೋಡಿ ರಿವ್ಯೂ ಕೂಡ ಹೇಳಿದ್ದಾರೆ.

ಏನಂದ್ರು ರಮ್ಯಾ?

ಕೆಲವೊಂದು ಸಿನಿಮಾಗಳನ್ನು ನೋಡಿದ್ರೆ ಏನು ಹೇಳ್ಬೇಕು ತಿಳಿಯೋದೆ ಇಲ್ಲ, ಯಾಕಂದ್ರೆ ಆ ಸಿನಿಮಾ ಹೊಗಳೋಕೆ ಮಾತುಗಳಿಲ್ಲ. ವ್ಯಕ್ತಪಡಿಸಲಾಗದ ಅನುಭವವನ್ನು ಈ ಸಿನಿಮಾ ನೋಡಿದಾಗ ನಾನು ಅನುಭವಿಸಿದ್ದೇನೆ. ಈ ಸಿನಿಮಾ ಖಂಡಿತಾ ನೋಡಲೇಬೇಕು. ಭೂತಕೋಲದ ಬಗ್ಗೆ ಎಷ್ಟೊಂದು ವಿಷಯಗಳನ್ನು ನಾನು ತಿಳಿದುಕೊಂಡೆ.

ಸಿನಿಮಾದ ಕಡೇ ಹತ್ತು ನಿಮಿಷ, ವಾವ್, ರಿಷಭ್ ಶೆಟ್ಟಿ ತನ್ನ ನಟನೆ ಮೂಲಕ ಏನನ್ನೋ ಸಾಧಿಸಿದ ಭಾವ ತೋರಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ನಾನು ಹೇಳಿದ ಪ್ರತಿ ಪದವನ್ನು ನೀವು ಒಪ್ಪುತ್ತೀರಿ.
ರಿಷಭ್ ಶೆಟ್ಟಿ ನಿಮ್ಮನ್ನು ಎಷ್ಟು ಹೊಗಳಿದ್ರೂ ಸಾಲದು, ನಾವೆಲ್ಲರೂ ಹೆಮ್ಮೆ ಪಡುವಂಥ ಸಿನಿಮಾ ಮಾಡಿದ್ದೀರಿ. ಸಪ್ತಮಿ ಗೌಡ, ಇದು ನಿಮ್ಮ ಎರಡನೇ ಸಿನಿಮಾ ಅಂದ್ರೆ ನಂಬೋಕೆ ಆಗಲ್ಲ, ನಿಮ್ಮ ಅಭಿನಯ ಇಷ್ಟವಾಯ್ತು. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!