ಹಣದುಬ್ಬರ ತಗ್ಗಿಸಲು ಮತ್ತೆ ರೆಪೊ ದರ ಹೆಚ್ಚಿಸಿದ ಆರ್‌ಬಿಐ: 50 ಬೇಸಿಸ್ ಪಾಯಿಂಟ್‌ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೆಚ್ಚುತ್ತಿರುವ ಹಣದುಬ್ಬರ ತಗ್ಗಿಸಲು ಸತತ ನಾಲ್ಕನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಕ್ಷಣದಿಂದಲೇ ಜಾರಿಗೆ ಬರುವಂತೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) 5.9 ಕ್ಕೆ ಏರಿಸಿದೆ.

ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ತನ್ನ ಮೂರು ದಿನಗಳ ಸಭೆಯನ್ನು ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚಿಸಲು ಸೆಪ್ಟೆಂಬರ್ 28 ರಂದು ಪ್ರಾರಂಭಿಸಿತ್ತು. ಪ್ರಸ್ತುತ ಈ ಸಮಿತಿಯ ಸಭೆಯಲ್ಲಿ ಚರ್ಚಿಸಿದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆಪೋ ದರವು ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಆರ್‌ಬಿಐನ ನಾಲ್ಕನೇ ದರ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ತನ್ನ ಆಫ್-ಸೈಕಲ್ ಹಣಕಾಸು ನೀತಿ ಪರಾಮರ್ಶೆಯಲ್ಲಿ, ಆರ್‌ಬಿಐ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ (ಬಿಎಸ್‌ಪಿ) 5.4 ಶೇಕಡಾಕ್ಕೆ ಹೆಚ್ಚಿಸಿತ್ತು. ಒಟ್ಟಾರೆಯಾಗಿ, ಈ ವರ್ಷದ ಮೇ ತಿಂಗಳಿನಿಂದ ಸೆಂಟ್ರಲ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 1.90 ರಷ್ಟು ಹೆಚ್ಚಿಸಿದೆ.

ರೆಪೋ ದರದ ಕುರಿತಾಗಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!