Friday, August 12, 2022

Latest Posts

ಇಂದಿನಿಂದ ರಣಜಿ ಟ್ರೋಫಿ ಟೂರ್ನಿ ಆರಂಭ: ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ರೈಲ್ವೇಸ್‌ ಎದುರಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಎರಡು ವರ್ಷಗಳಿಂದ ರದ್ದುಗೊಂಡಿದ್ದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಇಂದಿನಿಂದ ಆರಂಭವಾಗಲಿದೆ.
ಇಂದಿನಿಂದ ಚೆನ್ನೈ ನಲ್ಲಿ ನಡೆಯಲಿರುವ ಸಿ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಎದುರಾಳಿಯಾಗಿ ರೈಲ್ವೇಸ್‌ ಎದುರಾಗಲಿದೆ.
ಈ ಬಾರಿ ಕರ್ನಾಟಕ ತಂಡದ ನಾಯಕರಾಗಿದ್ದು, ಎಲೈಟ್‌ ಹಂತದಲ್ಲಿ ಒಟ್ಟು 8 ವಿಭಾಗಗಳಿದ್ದು, ಪ್ರತಿಯೊಂದರಲ್ಲೂ 8 ತಂಡಗಳಿವೆ. ಎಲ್ಲಾ ಪಂದ್ಯಗಳು ರಾಜ್‌ ಕೋಟ್‌, ದೆಹಲಿ, ಗುರ್ಗಾಂವ್‌, ಅಹ್ಮದಾಬಾದ್‌, ಗುವಾಹಟಿ, ಕೊಲ್ಕತಾ, ತಿರುವನಂತಪುರ, ಕಟಕ್‌ ಮತ್ತು ಭುವನೇಶ್ವರದಲ್ಲಿ ಲೀಗ್‌ ಪಂದ್ಯಗಳು ನಡೆಯಲಿವೆ.
ಕರ್ನಾಟಕ ತಂಡದಲ್ಲಿ ಮನೀಶ್‌ ಪಾಂಡೆ(ನಾಯಕ), ಆರ್‌.ಸಮರ್ಥ್‍, ಮಯಾಂಕ್ ಅಗರ್‌ವಾಲ್‌, ಕರುಣ್ ನಾಯರ್‌, ದೇವದತ್ ಪಡಿಕ್ಕಲ್‌, ಸಿದ್ಧಾರ್ಥ್ ಕೆ.ವಿ., ಡಿ.ನಿಶ್ಚಲ್‌, ಅನೀಶ್ವರ್‌ ಗೌತಮ್‌, ಶುಭಾಂಗ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಸುಚಿತ್‌, ಕಾರ್ಯಪ್ಪ, ಶರತ್‌ ಶ್ರೀನಿವಾಸ್‌, ಬಿ.ಆರ್‌.ಶರತ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ವೆಂಕಟೇಶ್‌, ವೈಶಾಖ್‌, ವಿದ್ಯಾಧರ್‌ ಪಾಟೀಲ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss