Sunday, July 3, 2022

Latest Posts

ರಣಬೀರ್-ಆಲಿಯಾ ಮದುವೆ ಮತ್ತೆ ಪೋಸ್ಟ್ ಫೋನ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಳೆದ ದಿನಗಳಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್ ಮದುವೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ಸ್‌ ಹರಿದಾಡುತ್ತಿವೆ. ಆದರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಈ ಜೋಡಿ ತಮ್ಮ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ
ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮದ ತಯಾರಿಯೂ ಜೋರಾಗಿ ನಡೆಯುತ್ತಿದ್ದು, ಇದರ ನಡುವೆ ಜೋಡಿ ರಣಬೀರ್​ ಹಾಗೂ ಆಲಿಯಾ ಮದುವೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಏಪ್ರಿಲ್​ 13 ಹಾಗೂ 14 ರಂದು ರಣಬೀರ್​ ಹಾಗೂ ಆಲಿಯಾ ಭಟ್​ ಮದುವೆ ನಡೆಯುತ್ತಿಲ್ಲ. ಆಲಿಯಾ ಅವರ ಸಹೋದರ ರಾಹುಲ್​ ಭಟ್​ ಈ ವಿಷಯ ಬಹಿರಂಗಪಡಿಸಿದ್ದಾರೆ. ಮದುವೆ ದಿನಾಂಕದ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದ್ದಂತೆ, ಈ ತಾರಾ ಜೋಡಿ ತಮ್ಮ ಮದುವೆ ದಿನಾಂಕವನ್ನು ಬದಲಾಯಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮದುವೆ ದಿನಾಂಕವನ್ನು ಮುಂದೂಡಲು ಮತ್ತೊಂದು ಕಾರಣವೆಂದರೆ ಭದ್ರತೆಯ ಕಾಳಜಿ. ಆಲಿಯಾ ಮತ್ತು ರಣಬೀರ್ ಮದುವೆ ಮತ್ತು ಇತರ ಹಬ್ಬಗಳಿಗಾಗಿ ಏಪ್ರಿಲ್ 14 ದಿನಾಂಕವನ್ನು ನಿಗದಿ ಮಾಡಿದ್ದರು ಎಂಬುದನ್ನು ರಾಹುಲ್ ಖಚಿತಪಡಿಸಿದ್ದಾರೆ. ರಣಬೀರ್-ಆಲಿಯಾ ವಿವಾಹವು ಏಪ್ರಿಲ್ 20ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ಎಂದು ಅವರು ಸುಳಿವು ನೀಡಿದ್ದಾರೆ.
‘ ಮದುವೆ ನಡೆಯುತ್ತಿದೆ, ಅದು ಎಲ್ಲರಿಗೂ ತಿಳಿದಿದೆ. ಆದ್ರೆ ಏಪ್ರಿಲ್ 13 ಅಥವಾ 14ಕ್ಕೆ ಮದುವೆ ಇಲ್ಲ ಅನ್ನೋದು ಖಚಿತ. ವಾಸ್ತವವಾಗಿ, ಹಿಂದಿನ ದಿನಾಂಕಗಳು ಇದೇ ಆಗಿದ್ದವು. ಆದರೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾದ ನಂತರ, ದಿನಾಂಕಗಳನ್ನು ಬದಲಾಯಿಸಲಾಯಿತು. ಒತ್ತಡ ಹೆಚ್ಚಿರುವ ಕಾರಣ ಎಲ್ಲವನ್ನೂ ಬದಲಾಯಿಸಲಾಗಿದೆ. ಏಪ್ರಿಲ್ 13 ಅಥವಾ 14 ರಂದು ಯಾವುದೇ ಮದುವೆ ಇಲ್ಲ ಎಂದು ನಾನು ಮಾತನ್ನು ನೀಡುತ್ತೇನೆ. ನನಗೆ ತಿಳಿದಿರುವಂತೆ, ಶೀಘ್ರದಲ್ಲೇ ದಿನಾಂಕದ ಬಗ್ಗೆ ಪ್ರಕಟಣೆ ಇರುತ್ತದೆ ಎಂದು ರಾಹುಲ್ ಭಟ್ ಹೇಳಿದರು.
ಈ ಹಿಂದೆ ನಿಗದಿಯಾದ ದಿನಾಂಕದಲ್ಲಿ ಏಪ್ರಿಲ್ 13 ರಿಂದ ಮೆಹೆಂದಿ ಸಮಾರಂಭದೊಂದಿಗೆ ಮದುವೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮರುದಿನ ಸಂಗೀತ ಸಮಾರಂಭ, ಏಪ್ರಿಲ್ 15 ರಂದು ಮದುವೆ ಹಾಗೂ 16ರಂದು ಔತಣಕೂಟ ನಡೆಯಲಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss