ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲಿಬ್ರಿಟಿ ಕಪಲ್ಸ್ ಗಳು ಪ್ರತಿಯೊಂದು ವಿಶೇಷ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಇದೀಗ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಜೋಡಿ ಕೂಡ ಹೊಸ ವರ್ಷವನ್ನು ಡಿಫರೆಂಟ್ ಆಗಿ ಆಚರಿಸಿದ್ದಾರೆ.
2022 ಅನ್ನು ಈ ಜೋಡಿ ವನ್ಯ ಜೀವಿಗಳ ನಡುವೆ ಆಚರಿಸಿಕೊಂಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಫೋಟೋ ಹಂಚಿಕೊಂಡ ಆಲಿಯಾ ಭಟ್, 2022ಕ್ಕೆ ಶಕ್ತಿಯನ್ನು ತುಂಬೋಣ, ಎಲ್ಲರೂ ಸುರಕ್ಷಿತರಾಗಿರಿ, ಖುಷಿಯಾಗಿರಿ, ಸರಳವಾಗಿರಿ ಮತ್ತು ಹೆಚ್ಚು ಪ್ರೀತಿಸಿ ಎಂದು ಹೊಸ ವರ್ಷದ ಶುಭಾಷಯಗಳು ಎಂದಿದ್ದಾರೆ.
ಆಲಿಯಾ ಹಂಚಿಕೊಂಡ ಫೋಟೋಗಳಲ್ಲಿ ರಣಬೀರ್ ಕೂಡ ಇದ್ದು, ಈ ಕ್ಯೂಟ್ ಜೋಡಿ ಜೊತೆಯಾಗಿ ಹೊಸವರ್ಷವನ್ನ ಬರಮಾಡಿಕೊಳ್ಳುತ್ತಿರುವುದನ್ನು ಕಂಡು ಅಭಿಮಾನಿಗಳು ಹಾಗೂ ಬಾಲಿವುಡ್ ಮಂದಿ ಖುಷಿ ಪಟ್ಟಿದ್ದಾರೆ.