ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಆಲಿಯಾ ಇದೀಗ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ರಿಲೀಸ್ ಆಗುವ ಖುಷಿಯಲ್ಲಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡಿ ಅಭಿನಯಿಸುವ ಆಲಿಯಾ ಇದೀಗ ಗಂಗೂಬಾಯಿ ರೀತಿ ಬದಲಾಗಿದ್ದಾರಂತೆ.
ಈ ಬಗ್ಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮಾತನಾಡಿದ್ದು, ಮನೆಯಲ್ಲೂ ಗಂಗೂಬಾಯಿ ರೀತಿ ಮಾತನಾಡುತ್ತಾಳೆ, ಆಲಿಯಾ ರಿಯಲ್ ಲೈಫ್ನಲ್ಲಿ ಆಲಿಯಾ ಆಗಿಲ್ಲ, ಗಂಗೂಬಾಯಿ ಆಗಿದ್ದಾಳೆ ಎಂದು ರಣ್ಬೀರ್ ಬನ್ಸಾಲಿಗೆ ದೂರು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದರಿಂದ ಕಿರಿಕಿರಿ ಆಗುತ್ತದೆ ಇದಕ್ಕೊಂದು ಪರಿಹಾರ ನೀಡಿ ಎಂದು ಬನ್ಸಾಲಿ ಬಳಿ ರಣ್ಬೀರ್ ಕೇಳಿಕೊಂಡಿದ್ದಾರಂತೆ!