Monday, September 26, 2022

Latest Posts

ರಣಬೀರ್‌ – ಆಲಿಯಾ ʼಬ್ರಹ್ಮಾಸ್ತ್ರʼಕ್ಕೂ ಬಹಿಷ್ಕಾರದ ಬಿಸಿ: ಚಿತ್ರಕ್ಕೆ ಮುಳುವಾದ ಆ ಒಂದು ಹೇಳಿಕೆ…


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್‌ ನಟ ರಣಬೀರ್ ಹಾಗೂ ಆಲಿಯಾ ಭಟ್‌ ನಟನೆಯ ಚಿತ್ರ ಬ್ರಹ್ಮಾಸ್ತ್ರ ಬಿಡುಗಡೆ ಮುನ್ನವೇ ಬಹಿಷ್ಕಾರಕ್ಕೆ ತುತ್ತಾಗಿದೆ.
450 ಕೋಟಿ ರೂ.ಗಳ ಮೆಗಾ ಪ್ರಾಜೆಕ್ಟ್ ಬ್ರಹ್ಮಾಸ್ತ್ರ ಬಾಯ್ಕಾಟ್‌ ಕರೆಯಿಂದ ನಿರ್ಮಾಪಕರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಹಲವಾರು ಬಾಲಿವುಡ್ ಚಿತ್ರಗಳು ಬಾಯ್ಕಾಟ್‌ ನಿಂದ ಸಂಕಷ್ಟಕ್ಕೆ ಒಳಗಾಗಿವೆ.‌ ಬ್ರಹ್ಮಾಸ್ತ್ರ ಆ ಸಾಲಿಗೆ ಹೊಸ ಸೇರ್ಪಡೆ. ನೆಟಿಜನ್‌ಗಳು ಇದಕ್ಕೆ ಹಲವಾರು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆಲಿಯಾ ಭಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮೇಲಿನ ನೆಪೋಟಿಸಂ ಟೀಕೆಗಳಿಗೆ ಪ್ರತಿಯಾಗಿ ‘ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನನ್ನು ನೋಡಬೇಡಿ’ ಎಂದು ಕಾಮೆಂಟ್ ಮಾಡಿ ಅನೇಕರ ಕಣ್ಣು ಕೆಂಪಾಗುವಂತೆ ಮಾಡಿದ್ದರು.

ಜನರು ಹೇಳಲು ಏನಾದರೊಂದು ವಿಚಾರವನ್ನು ಹೊಂದಿರುತ್ತಾರೆ. ಆ ಬಗ್ಗೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಅಲಿಯಾ ಹೇಳಿಕೆ ಜನರ ಆಕ್ರೋಶಕ್ಕೆ ತುತ್ತಾದ ಕೆಲವು ದಿನಗಳ ನಂತರ, ಆಹಾರ ಬ್ಲಾಗರ್ ಮತ್ತು ಬರಹಗಾರ ಕುನಾಲ್ ವಿಜಯ್ಕರ್ ಅವರೊಂದಿಗೆ ಕಪೂರ್ ಅವರ ಹಳೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿತ್ತು. ಈ ವೀಡಿಯೊದಲ್ಲಿ, ರಣಬೀರ್ ಮತ್ತು ವಿಜಯ್ಕರ್ ಆಹಾರವೊಂದನ್ನು ಸೇವಿಸುತ್ತಿರುವುದನ್ನು ಕಾಣಬಹುದಿತ್ತು. ಈ ವೇಳೆ ರಣಬೀರ್, “ನಾನು ದೊಡ್ಡ ಗೋಮಾಂಸ‌ ಭಕ್ಷಕ ವ್ಯಕ್ತಿ” ಎಂದು ಹೇಳಿಕೊಂಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ರಣಬೀರ್‌ ಕಪೂರ್‌ ಭೀಫ್‌ ಇನ್ನುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಅವರ ಚಿತ್ರಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಕ್ರಿಯೆ ನೀಡೋಣ ಎಂದು ಹಲವರು ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!