ವಿದೇಶಗಳಲ್ಲೂ ವಿಸ್ತರಿಸಲಿದೆ ಟೈಟನ್‌ ʼತನಿಷ್ಕ್‌ʼ ಆಭರಣ ಮಳಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದ ಪ್ರಸಿದ್ಧ ಆಭರಣ ಕಂಪನಿಯಾದ ಟೈಟಾನ್‌ ತನಿಷ್ಕ್‌ ಮುಂದಿನ ದಿನಗಳಲ್ಲಿ ವಿದೇಶಗಳಲ್ಲಿ ತನ್ನ ಟೈಟಾನ್‌ ಸ್ಟೋರ್‌ ಗಳನ್ನು ವಿಸ್ತರಿಸಲು ಯೋಚಿಸುತ್ತಿದೆ ಎಂದು ಟೈಟಾನ್‌ನ ಎಂಡಿ ಸಿ ಕೆ ವೆಂಕಟರಾಮನ್ ಹೇಳಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಸಮುದಾಯದವರನ್ನು ಗಮನದಲ್ಲಿಟ್ಟುಕೊಂಡು ಈ ವಿಸ್ತರಣೆಯ ಕುರಿತು ಯೋಜಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಮಧ್ಯ ಪ್ರ್ಯಾಚ್ಯ ಹಾಗೂ ಉತ್ತರ ಅಮೇರಿಕ ಪ್ರದೇಶಗಳಲ್ಲಿ 20 ರಿಂದ 30 ಟೈಟನ್‌ ಮಳಿಗೆ ತೆರೆಯುವ ಕುರಿತು ಕಂಪನಿ ಯೋಚಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಹಬ್ಬದ ಋತುಗಳಲ್ಲಿ ಕಂಪನಿಯ ಮಾರಾಟವು 15 ರಿಂದ 20 ಶೇಕಡಾದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.

2019ರಿಂದ ಕೋವಿಡ್‌ ನಿರ್ಬಂಧಗಳ ನಂತರ ಯಾವುದೇ ನಿರ್ಭಂಧ ಗಳಿಲ್ಲದ ಮೊದಲ ಹಬ್ಬದ ತ್ರೈಮಾಸಿಕ ಇದಾಗಿದೆ ಆದ್ದರಿಂದ ಮಾರಾಟದಲ್ಲಿ ಏರಿಕೆಯಾಗುವ ಕುರಿತು ಕಂಪನಿ ನಿರೀಕ್ಷೆ ಹೊಂದಿದೆ.

ಇತ್ತೀಚೆಗಷ್ಟೇ ತನ್ನ ಎಲ್ಲಾ ಟೈಟಾನ್ ಉತ್ಪನ್ನಗಳನ್ನು ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ದೊರಕುವಂತೆ ಮಾಡಲು ʼಟೈಟಾನ್ ಶೌರ್ಯʼ ಉಪಕ್ರಮವನ್ನು ಕಂಪನಿ ಬಿಡುಗಡೆಗೊಳಿಸಿದೆ. ಇದು ಟೈಟಾನ್‌ ನ ಕೈಗಡಿಯಾರಗಳು, ಆಭರಣಗಳು, ಕನ್ನಡಕಗಳು, ಸುಗಂಧ ದ್ರವ್ಯಗಳು ಮತ್ತು ಸೀರೆಗಳು ಮುಂತಾದ ಉತ್ಪನ್ನಗಳನ್ನು ಸಶಸ್ತ್ರಪಡೆಯವರು ಖರೀದಿಸಲು ಅನುಕೂಲ ಮಾಡಿಕೊಡುತ್ತದೆ. ಅವರಿಗೆ ಲಭ್ಯವಿರುವ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (CSD) ಸ್ಮಾರ್ಟ್ ಕಾರ್ಡ್ ಅನ್ನು ಒದಗಿಸುವ ಮೂಲಕ ಅವರು ಟೈಟಾನ್‌ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸಶಸ್ತ್ರ ಪಡೆಗಳಿಂದ ಪ್ರೇರಿತವಾದ ವಿಶೇಷ ಆವೃತ್ತಿಯ ವಾಚ್‌ಗಳನ್ನು ಕೂಡ ಟೈಟನ್‌ ಹೊರತರುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!