BOLLYWOOD| ʻಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸುವೆʼ:ವಿವಾದಾತ್ಮಕ ಕಾಮೆಂಟ್‌ಗಳಿಗೆ ರಣಬೀರ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ರರಂಗದಲ್ಲಿ ಅಥವಾ ಯಾವುದೇ ಕಲಾ ವಿಭಾಗದಲ್ಲಿ ಇರುವವರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಕಲೆಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ನಮ್ಮ ಚಿತ್ರರಂಗದ ನಟರು ಬೇರೆ ದೇಶಗಳ ಯಾವುದೇ ಚಿತ್ರೋದ್ಯಮಕ್ಕೆ ಹೋಗಿ ನಟಿಸಬಹುದು ಪಾಕಿಸ್ತಾನ ಬಿಟ್ಟು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಗಳಿಂದಾಗಿ ಇಲ್ಲಿನ ನಟರು ಅಷ್ಟು ಬೇಗ ಪಾಕಿಸ್ತಾನಿ ಚಿತ್ರಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಆದರೆ ಪಾಕಿಸ್ತಾನದಿಂದ ಬಂದು ಭಾರತೀಯ ಚಿತ್ರಗಳಲ್ಲಿ ನಟಿಸುವವರೇ ಹೆಚ್ಚು.

ಇತ್ತೀಚೆಗೆ ರಣಬೀರ್ ಕಪೂರ್ ಆ ಟೀಕೆಯನ್ನು ಎದುರಿಸಿದ್ದರು. ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಆ ಚಿತ್ರೋತ್ಸವದಲ್ಲಿ ಪಾಕಿಸ್ತಾನಿ ನಿರ್ಮಾಪಕರೊಬ್ಬರು ಪಾಕಿಸ್ತಾನಿ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ ಮಾಡುತ್ತೀರಾ ಎಂಬ ಪ್ರಶ್ನೆಗೆ ರಣಬೀರ್ ಉತ್ತರಿಸಿದ್ದು, ‘ಖಂಡಿತವಾಗಿಯೂ ನಟಿಸುತ್ತೇನೆ, ಕಲಾವಿದರು ಮತ್ತು ಕಲೆಗಳಿಗೆ ಯಾವುದೇ ಗಡಿ ಇರುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದರು. ರಣಬೀರ್‌ ಹೇಳಿಕೆ ವಿವಾದಕ್ಕೀಡಾಗಿದೆ. ಈ ಕಾಮೆಂಟ್‌ಗಳಿಗಾಗಿ ಭಾರತದ ಅನೇಕ ಜನರು ರಣಬೀರ್ ಅವರನ್ನು ಟೀಕಿಸಿ ಪಾಕಿಸ್ತಾನಿ ಸಿನಿಮಾಗಳಲ್ಲಿ ಹೇಗೆ ನಟಿಸುತ್ತಾರೆ ಎಂದು ಪ್ರಶ್ನಿಸಿದ್ದರು.

ಈ ಕಾಮೆಂಟ್‌ಗಳಿಗೆ ರಣಬೀರ್ ಸ್ಪಷ್ಟನೆ ನೀಡಿದ್ದಾರೆ. ರಣಬೀರ್ ಪ್ರಸ್ತುತ ತಮ್ಮ ಮುಂದಿನ ಚಿತ್ರ ತೂ ಜುಟಿ ಮೈನ್ ಮಕ್ಕರ್‌ನ ಪ್ರಚಾರದಲ್ಲಿದ್ದಾರೆ. ಚಿತ್ರದ ಪ್ರಚಾರದ ಅಂಗವಾಗಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾಧ್ಯಮ ಪ್ರತಿನಿಧಿಗಳು ಈ ವಿವಾದದ ಬಗ್ಗೆ ರಣಬೀರ್ ಅವರನ್ನು ಕೇಳಿದಾಗ ರಣಬೀರ್ ಪ್ರತಿಕ್ರಿಯಿಸಿ, ”ನಾನು ಹೇಳಿದ್ದನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಚಿತ್ರೋತ್ಸವಕ್ಕೆ ಹೋದಾಗ ಪಾಕಿಸ್ತಾನಿ ಚಿತ್ರರಂಗದವರೂ ಅಲ್ಲಿಗೆ ಬಂದಿದ್ದರು. ಇಂತಹ ಸಂದರ್ಭದಲ್ಲಿ ಈ ಪ್ರಶ್ನೆ ಕೇಳಿದರು. ಆಗ ತಕರಾರು ಬೇಡ ಎಂದು ನಟಿಸುತ್ತೇನೆ ಎಂದೆ. ನನಗೆ ಸಿನಿಮಾಗಳು ಮುಖ್ಯ. ನನಗೆ ಅನೇಕ ಪಾಕಿಸ್ತಾನಿ ಚಿತ್ರರಂಗದ ವ್ಯಕ್ತಿಗಳು ಗೊತ್ತು. ಅವರು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮತ್ತು ಕಲೆಗೆ ಯಾವುದೇ ಗಡಿಗಳಿಲ್ಲ ಎಂದು ನಾನು ನಂಬುತ್ತೇನೆ. ಆದರೆ ಕಲೆಗಿಂತ ದೇಶ ದೊಡ್ಡದು. ಇಂತಹ ಸಮಯದಲ್ಲಿ ದೇಶಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!