ರಣಬೀರ್,ಯಶ್, ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ‘ರಾಮಾಯಣ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ‘ರಾಮಾಯಣ’ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಂಡಿರುವ ಬಹುಕೋಟಿ ವೆಚ್ಚದ ಚಿತ್ರ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದ್ದು, ಸಿನಿಮಾದ ಮೊದಲ ಫೋಸ್ಟರ್ ಬಿಡುಗಡೆಯಾಗಿದೆ.

ಭಾಗ-1 2026ರ ದೀಪಾವಳಿಯಂದು ಬಿಡುಗಡೆಯಾದರೆ ಭಾಗ -2 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಯಶ್ ಒಡೆತನದ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಮಾಲೀಕತ್ವದ ಫ್ರೈಮ್ ಪೋಕಸ್ ಸ್ಟುಡಿಯೊ ಜಂಟಿ ಸಹಭಾಗಿತ್ವದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!