ಹೊಸದಿಗಂತ ವರದಿ,ಮಳವಳ್ಳಿ:
ಟೆಂಪೋವೊoದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಾರ್ಕಾಲು ಗೇಟ್ ಬಳಿ ನಡೆದಿದೆ.
ಪಟ್ಟಣದ ಗಂಗಾಮತ ಬೀದಿಯ ಉತ್ತೂರಯ್ಯನ ಬಡಾವಣೆಯ ಟೈಲರ್ ಸುಬ್ಬಯ್ಯ ಎಂಬುವರ ಪುತ್ರ ವೆಂಕಟೇಶ್ (೨೭) ಮೃತಪಟ್ಟ ಯುವಕನಾಗಿದ್ದು, ಹಿಂಬದಿ ಸವಾರ ಶಿವಕುಮಾರ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ಮೃತ ವೆಂಕಟೇಶ್ ಬೈಕ್ ನಲ್ಲಿ ಸ್ನೇಹಿತನ ಜತೆ ಮಳವಳ್ಳಿಯಿಂದ ಕಿರುಗಾವಲು ಕಡೆಗೆ ಹೋಗುತ್ತಿದ್ದ ವೇಳೆ ಮೈಸೂರು-ಮಳವಳ್ಳಿ ಮುಖ್ಯರಸ್ತೆಯ ಮಾರ್ಕಾಲು ಬಳಿ ಎದುರಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಮೈಸೂರಿಗೆ ಕೆರೆದುಕೊಂಡ ಹೋಗುವ ಮಾರ್ಗಮಧ್ಯೆ ವೆಂಕಟೇಶ್ ಸಾವನ್ನಪ್ಪಿದ್ದಾನೆ, ಗಾಯಗೊಂಡ ವ್ಯಕ್ತಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಸಬ್‌ಇನ್ಸ್ಪೇಕ್ಟರ್ ಡಿ.ರವಿಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಸಂಬoಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.