ಹೊಸದಿಗಂತ ವರದಿ,ಕಲಬುರಗಿ:
ಕೇವಲ ಜಿಲ್ಲಾ ಕೇಂದ್ರಗಳಲ್ಲಿಯೇ ಸಕ್ರಿಯವಾಗಿದ್ದ ರಂಗಾಯಣವು ತಾಲೂಕಿನತ್ತ ಚಲಿಸಿ,ಈಗ ಗ್ರಾಮೀಣದೆಡೆಗೆ ಹೆಜ್ಜೆ ಇಡಲು ಸಜ್ಜಾಗಿದೆ ಎಂದು ರಂಗಾಯಣ ನಿರ್ದೇಶಕರದ ಪ್ರಭಾಕರ ಜೋಶಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮ ವಿಕಾಸದತ್ತ ರಂಗಭೂಮಿ ಎಂಬ ಪರಿಕಲ್ಪನೆಯ ಅನುಸಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಏಳು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಆ ಗ್ರಾಮಗಳಲ್ಲಿ ರಂಗಾಯಣ ಕಲಾವಿದರು ಮೂರು ದಿನಗಳ ಕಾಲ ಅಲ್ಲಿದ್ದು, ಗ್ರಾಮೀಣರ ಕಲೆಯನ್ನು ಗುರುತಿಸಿ ಪ್ರದರ್ಶನ ನೀಡಲು ಪ್ರೇರಣೆ ನೀಡುವರು.ಉಳಿದ ಎರಡು ದಿನಗಳ ಕಾಲ ಆಯಾ ಗ್ರಾಮಗಳಲ್ಲಿ ರಂಗಾಯಣ ರಂಗೋತ್ಸವ ನಡೆಯಲಿದೆ ಎಂದರು.
ವಿವಿಧ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗಭೂಮಿಯಲ್ಲಿ ಆಸಕ್ತಿ ಮೂಡಿಸಲು ತರಬೇತಿ ನೀಡಿ, ಕಾಲೇಜು ರಂಗೋತ್ಸವ ಏರ್ಪಡಿಸಲಾಗುವುದು. ಎರಡನೇ ವರ್ಷದಲ್ಲಿ ಗಮನಾರ್ಹ ಕೆಲಸಗಳಾಗಿದ್ದು, ನಾಟಕಗಳ ಪ್ರದರ್ಶನ ಜತೆಗೆ ವಿಚಾರ ಸಂಕೀರ್ಣಗಳು,ವಿವಿಧ ತರಭೇತಿ ಶಿಬಿರಗಳು ನಡೆದಿವೆ ಎಂದು ತಿಳಿಸಿದರು. ರಂಗಾಯಣದಲ್ಲಿ ಭೌದ್ದಿಕ ಚುಟುವಟಿಕೆಗಳು ನಡೆದಿದ್ದು, 1000 ಜನರ ಬಯಲು ಮಂದಿರದ ಆಡಳಿತ ಭವನದ ಭನವದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಜಗಧೀಶ್ವರಿ ನಾಸಿ, ಮಲ್ಲಿನಾಥ ಜಿ.ಎಲ್ ಇದ್ದರು.