ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶವೇ ಎದುರು ನೋಡುತ್ತಿರುವ ಶ್ರೀರಾಮ ಪ್ರಾಣಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ.
ಇಡೀ ದೇಶದಲ್ಲಿ ರಾಮಭಕ್ತರು ತಮಗೆ ಬರುವ ರೀತಿಯಲ್ಲಿ ರಾಮಭಕ್ತಿ ಮೆರೆದಿದ್ದಾರೆ, ಮರಳ ಮೇಲೆ ರಾಮಮಂದಿರ, ಸೀರೆಯೊಳಗೆ ಶ್ರೀರಾಮ ಜಪ ಹೀಗೆ ಸಾಕಷ್ಟು ರೀತಿ ದೈವಭಕ್ತಿಯನ್ನು ಜನ ಹೊರಹಾಕಿದ್ದಾರೆ.
ಅಂತೆಯೇ ರಂಗೋಲಿ ಕಲಾವಿದ ಅಕ್ಷಯ್ ಜಾಲಿಹಾಳ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಅದ್ಭುತ ರಾಮಮಂದಿರದ ರಂಗೋಲಿಯನ್ನು ಬಿಡಿಸಿದ್ದಾರೆ.
ತ್ರೀಡಿ ಎಫೆಕ್ಟ್‌ನ ರಂಗೋಲಿ ಇದಾಗಿದ್ದು, ಅಕ್ಷಯ್ ಕೈಚಳಕಕ್ಕೆ ಜನರು ಫಿದಾ ಆಗಿದ್ದಾರೆ. ಒಟ್ಟಾರೆ 25 ಅಡಿ ಅಗಲ ಹಾಗೂ 25 ಅಡಿ ಎತ್ತರದ ರಾಮಂಮಂದಿರ ರಂಗೋಲಿ ಇದಾಗಿದ್ದು, ಮಾಲ್‌ನ ಪ್ರಮುಖ ಆಕರ್ಷಣೆಯಾಗಿದೆ. ಮಾಲ್‌ಗೆ ಬಂದವರು ಎಲ್ಲವನ್ನೂ ಬಿಟ್ಟು ಮೊದಲು ಶ್ರೀರಾಮನ ದರುಶನ ಪಡೆದು, ಅಕ್ಷಯ್ ಕೈಚಳಕ ಹೊಗಳಿದ್ದಾರೆ.