ರಣಜಿ: ಶತಕ ಸಿಡಿಸಿ ಸಂಭ್ರಮಿಸಿದ ಬಂಗಾಳ ಕ್ರೀಡಾ ಸಚಿವ ಮನೋಜ್​​ ತಿವಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಣಜಿ ಕ್ವಾರ್ಟರ್​ ಫೈನಲ್​​ ಪಂದ್ಯದಲ್ಲಿ ಜಾರ್ಖಂಡ್​ ವಿರುದ್ಧ ಪಶ್ಚಿಮ ಬಂಗಾಳ ಬ್ಯಾಟರ್‌ ಮನೋಜ್ ತಿವಾರಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ​​ ಎರಡನೇ ಇನ್ನಿಂಗ್ಸ್​​​ನಲ್ಲಿ ಶತಕ ಬಾರಿಸಿದರು.
ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್​​​ನಲ್ಲಿ ಮುನ್ನಡೆ ಪಡೆದುಕೊಂಡ ಕಾರಣ ಪ.ಬಂಗಾಳ ಸೆಮಿಫೈನಲ್​​ ಪ್ರವೇಶಿಸಿದೆ.
ಪಶ್ಚಿಮ ಬಂಗಾಳ ಸರಕಾರದ ಕ್ರೀಡಾ ಸಚಿವರಾಗಿರುವ ಇವರು , ರಾಜಕೀಯ ಪ್ರವೇಶಿಸಿದ ಬಳಿಕದ ಮೊದಲ ಶತಕ. ಈ ಹಿಂದೆ 2019-20ರ ಸಾಲಿನಲ್ಲಿ ಹೈದರಾಬಾದ್​ ವಿರುದ್ಧದ ಇವರು ಅಜೇಯ 303 ರನ್​​​ಗಳಿಕೆ ಮಾಡಿದ್ದರು.
ಮನೋಜ್ ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 125 ಪ್ರಥಮ ದರ್ಜೆ ಮತ್ತು 163 ಲಿಸ್ಟ್​ ಎ ಪಂದ್ಯಗಳನ್ನೂ ಆಡಿದ್ದು, ದೇಶೀಯ ಕ್ರಿಕೆಟ್​​ನಲ್ಲಿ 14,000 ರನ್​​​ಗಳಿಸಿದ್ದಾರೆ.
ಕಳೆದ ವರ್ಷದ ಪ.ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಿವಾರಿ, ಟಿಎಂಸಿ ಪಕ್ಷದಿಂದ ಗೆಲುವು ಸಾಧಿಸಿ ಇದೀಗ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!