February 26, 2026
Thursday, February 26, 2026
spot_img

ರಣಜಿ ಫೈನಲ್ | ಪ್ರಸಿದ್ಧ್ ಕೃಷ್ಣ ತೆಕ್ಕೆಗೆ ಐದು ವಿಕೆಟ್: 584ಕ್ಕೆ ಆಲ್ ಔಟ್ ಆದ ಜಮ್ಮು ಕಾಶ್ಮೀರ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಳೆದ ಎರಡು ದಿನ ಕರ್ನಾಟಕ ಬಲಿಷ್ಠ ಕರ್ನಾಟಕ ತಂಡದ ಬಾಲರ್ ಗಳನ್ನು ಕಾಡಿದ ಜಮ್ಮು ಕಾಶ್ಮೀರದ ತಂಡ ಮೂರನೇ ದಿನ ಮೊದಲ ಅವಧಿಯಲ್ಲಿ ಸರ್ವ ಪತನ ಕಂಡಿತು.

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ಬ್ಯಾಟಿಂಗ್ ನಲ್ಲಿ ಪ್ರಾಬಲ್ಯ ಮೆರೆದಿದ್ದು, 173.1 ಓವರ್ ಗೆ 584 ರನ್ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಬೃಹತ್ ಗುರಿ ನೀಡಿದೆ.

ಇದನ್ನೂ ಓದಿ:

ಎರಡನೇ ದಿನ ಅಂತ್ಯಕ್ಕೆ ಜಮ್ಮು ಕಾಶ್ಮೀರ 156 ಓವರ್ ಗೆ ಆರು ವಿಕೆಟ್ ಕಳೆದುಕೊಂಡು 527 ರನ್ ಗಳಿಸಿತ್ತು. ಮೂರನೇ ದಿನದಾಟ ಉಳಿದ ನಾಲ್ಕು ವಿಕೆಟ್ ಕಳೆದು ಕೊಂಡಿತು. ಜಮ್ಮು ಕಾಶ್ಮೀರ ತಂಡ ಸಾಹಿಲ್ ಲೋತ್ರಾ 138 ಬಾಲ್ ಗೆ 72 ರನ್ ಗಳಿಸಿದರು.

ಪ್ರಸಿದ್ಧ್ ಕೃಷ್ಣಗೆ ಐದು ವಿಕೆಟ್ ಗೊಂಚಲು: ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ಐದು ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಮೂರನೇ ದಿನ ಐದನೇ ಓವರ್ ನಲ್ಲಿ ಅಬಿದ್ ಮುಷ್ತಾಕ್ (28 ರನ್, 50 ಎ) ಅವರ ವಿಕೆಟ್ ಪಡೆದರು. ಬಳಿಕ 162 ಓವರ್ ನಲ್ಲಿ ಅಕೀಬ್ ನಬಿ (2 ರನ್, 9 ಬಾಲ್) ಪಡೆಯುವ ಮೂಲಕ ಸಂಭ್ರಮಿಸಿದರು. ವೈಶಾಕ ವಿಜಯಕುಮಾರ್ (ಬ್ಯಾಟರ್ ಸಾಹಿಲ್ ಲೋತ್ರಾ) ಕೊನೆಗೂ ಒಂದು ವಿಕೆಟ್ ಪಡೆದು ಆಕಾಶಕ್ಕೆ ಕೈ ಮುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !