April 28, 2026
Tuesday, April 28, 2026
spot_img

ಆಲೂಗಡ್ಡೆ VS ಸಿಹಿ ಗೆಣಸು: ಇವೆರಡರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು​?

ಅಡುಗೆ ಮನೆಯಲ್ಲಿ ಆಲೂಗಡ್ಡೆ ಇರದೇ ಇರುವುದೇ ಅಪರೂಪ. ಆದರೆ ಇತ್ತೀಚೆಗೆ ಆರೋಗ್ಯದ ಬಗ್ಗೆ ಜಾಗೃತರಾದವರು ಸಿಹಿ ಗೆಣಸಿನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಅನ್ನೋದು ನೀವು ತಿಳ್ಕೊಳಿ.

ಆಲೂಗಡ್ಡೆ ಶಕ್ತಿಯ ಉತ್ತಮ ಮೂಲ. ಕಾರ್ಬೊಹೈಡ್ರೇಟ್ ಅಧಿಕವಾಗಿದ್ದು, ದೇಹಕ್ಕೆ ತಕ್ಷಣದ ಎನರ್ಜಿ ನೀಡುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಅಂಶವೂ ಇದರಲ್ಲಿ ಇದೆ. ಆದರೆ ಇದನ್ನು ಹೆಚ್ಚು ಎಣ್ಣೆಯಲ್ಲಿ ಕರಿದರೆ ಕ್ಯಾಲೊರಿ ಪ್ರಮಾಣ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವ ಗ್ಲೈಸೆಮಿಕ್ ಸೂಚ್ಯಂಕವೂ ಹೆಚ್ಚು.

ಇದನ್ನೂ ಓದಿ:

ಇನ್ನೊಂದೆಡೆ ಸಿಹಿ ಗೆಣಸು ಫೈಬರ್, ವಿಟಮಿನ್ ಎ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧ. ಕಣ್ಣುಗಳ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೈಕೆಗೆ ಇದು ಸಹಾಯಕ. ಇದರ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಸಕ್ಕರೆ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಮಧುಮೇಹದ ಅಪಾಯ ಇರುವವರು ಸಿಹಿ ಗೆಣಸನ್ನು ಆಯ್ಕೆ ಮಾಡಬಹುದು.

ಹಾಗಾದರೆ ತೀರ್ಮಾನವೇನು? ಎರಡೂ ಆಹಾರ ಪದಾರ್ಥಗಳು ತಮ್ಮದೇ ಆದ ಪೌಷ್ಟಿಕ ಮೌಲ್ಯ ಹೊಂದಿವೆ. ಆದರೆ ಆರೋಗ್ಯದ ದೃಷ್ಟಿಯಿಂದ, ವಿಶೇಷವಾಗಿ ತೂಕ ನಿಯಂತ್ರಣ ಮತ್ತು ಸಕ್ಕರೆ ನಿಯಂತ್ರಣ ನೋಡಿದರೆ ಸಿಹಿ ಗೆಣಸು ಸ್ವಲ್ಪ ಮೇಲುಗೈ ಸಾಧಿಸುತ್ತದೆ. ಬಳಸುವ ವಿಧಾನವೇ ಅಂತಿಮ ಫಲಿತಾಂಶ ನಿರ್ಧರಿಸುತ್ತದೆ ಎಂಬುದನ್ನು ಮರೆಯಬಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !