ರಣಜಿ ಪಂದ್ಯದಲ್ಲಿ ಬರೊಬ್ಬರಿ 880 ರನ್ ಕಲೆಹಾಕಿ ಇತಿಹಾಸ ಬರೆದ ಜಾರ್ಖಂಡ್!

0
348

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕೊಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ನಾಗಾಲ್ಯಾಂಡ್‌ ವಿರುದ್ಧ ಕಣಕ್ಕಿಳಿದಿರುವ ಜಾರ್ಖಂಡ್ ಬ್ಯಾಟ್ಸ್‌ ಮನ್‌ ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಬರೊಬ್ಬರಿ 880 ರನ್ ಕಲೆಹಾಕುವ ಮೂಲಕ ಇತಿಹಾಸ ಬರೆದಿದ್ದಾರೆ!.
ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಜಾರ್ಖಂಡ್ ತಂಡದ ಗರಿಷ್ಠ ಸ್ಕೋರ್ ಆಗಿದೆ. ಜಾರ್ಖಂಡ್ ಪರ ವಿಕೆಟ್ ಕೀಪರ್ ಕುಮಾರ್ ಕುಶಾಗ್ರಾ ದ್ವಿಶತಕ (266) ಸಿಡಿಸಿದರೆ, ಶಹಬಾಜ್ ನದೀಮ್ 177, ವಿರಾಟ್ ಸಿಂಗ್ 107 ರನ್ ಕಲೆಹಾಕಿದರು.
11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿದ ಬೌಲರ್‌ ರಾಹುಲ್ ಶುಕ್ಲಾ ಸಹ 85 ರನ್‌ ಕಲೆಹಾಕಿದ್ದು ವಿಶೇಷವಾಗಿದೆ. ಜಾರ್ಖಂಡ್‌ನ ಕೊನೆಯ ಕೊನೆಯ ವಿಕೆಟ್‌ ಗೆ ಜೊತೆಯಾದ ಶಹಬಾಜ್‌ ಹಾಗೂ ಶುಕ್ಲಾ 191 ರನ್‌ಗಳ ಜೊತೆಯಾಟವಾಡಿದ್ದು ವಿಶೇಷವಾಗಿದೆ. ಜಾರ್ಖಂಡ್‌ ೮೮೦ ರನ್‌ ಕಲೆಹಾಕುವ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ಸ್ಕೋರ್‌ ಕಲೆಹಾಕಿದ ಖ್ಯಾತಿಗೆ ಭಾಜನವಾಗಿದೆ. ಈ ಹಿಂದೆ ಆಂದ್ರ ವಿರುದ್ಧ ಹೈದರಾಬಾದ್ 944 ರನ್ ಗಳಿಸಿರುವುದು ಈ ವರೆಗಿನ ಗರಿಷ್ಠ ಸ್ಕೋರ್‌ ದಾಖಲೆ. ತಮಿಳುನಾಡು 912, ಮಧ್ಯಪ್ರದೇಶ 912 ಕಲೆಹಾಕಿ ನಂತರದ ಸ್ಥಾನದಲ್ಲಿವೆ.

LEAVE A REPLY

Please enter your comment!
Please enter your name here