ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಂಪತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ಶೇರ್ ಮಾಡಿ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸೆ.8ರಂದು ನಟಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದ ದೀಪಿಕಾ ದಂಪತಿ ಎಲ್ಲೂ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಮಗಳ ಕಾಲಿನ ಫೋಟೋ ಶೇರ್ ಮಾಡಿದ್ದಾರೆ. ಮಗುವಿಗೆ ‘ದುವಾ’ ಎಂದು ಹೆಸರಿಟ್ಟಿದ್ದಾರೆ.
ಅದಷ್ಟೇ ಅಲ್ಲ, ದುವಾ ಹೆಸರಿನ ಅರ್ಥವನ್ನು ಅವರು ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥವಾಗಿದೆ. ಯಾಕೆಂದರೆ ನಮ್ಮ ಪ್ರಾರ್ಥನೆಗೆ ಅವಳು ಉತ್ತರ ಎಂದು ನಟಿ ಬರೆದುಕೊಂಡಿದ್ದಾರೆ.
2015 ರಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಇಟಲಿಯಲ್ಲಿ ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.