ಕಾಂಗ್ರೆಸ್ ಪರ ರಣವೀರ್ ಸಿಂಗ್ ಪ್ರಚಾರ?: ಡೀಪ್​ಫೇಕ್ ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲಿಸಿದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಡೀಪ್​ಫೇಕ್ ವಿಡಿಯೋಗಳ ಹಾವಳಿ ಜೋರಾಗುತ್ತಿದ್ದು, ಇದೀಗ ನಟ ರಣವೀರ್ ಸಿಂಗ್ ಸರದಿ.

ನಟ ರಣವೀರ್ ಸಿಂಗ್ ಅವರ ಫೇಕ್ ವಿಡಿಯೋ ಮಾಡಲಾಗಿದ್ದು, ಅದ್ರಲ್ಲಿ ರಾಜಕೀಯ ಪಕ್ಷ ಒಂದರ ಪ್ರಚಾರ ಮಾಡುತ್ತಿರುವ ರೀತಿಯಲ್ಲಿ ವಿಡಿಯೋ ಇದೆ. ಈ ಸಂಬಂಧ ರಣವೀರ್ ಸಿಂಗ್ ತಂಡದ ಕೇಸ್ ದಾಖಲು ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ನಟರನ್ನೇ ಹೋಲುವವರ ಡೀಪ್​ಫೇಕ್ ವಿಡಿಯೋ ಮಾಡಲಾಗುತ್ತಿದ್ದು, ಎಐ ಟೂಲ್ ಬಳಕೆ ಮಾಡಿ ರಣವೀರ್ ಸಿಂಗ್ ಧ್ವನಿಯನ್ನು ಅನುಕರಿಸಿದ್ದಾರೆ.

ನಿರುದ್ಯೋಗ ಹಾಗೂ ಹಣ ದುಬ್ಬರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಣವೀರ್ ಸಿಂಗ್ ಟೀಕಿಸುತ್ತಿರುವ ರೀತಿಯಲ್ಲಿ ವಿಡಿಯೋ ಇದೆ. ಕೊನೆಯಲ್ಲಿ ಅವರು ಕಾಂಗ್ರೆಸ್​ಗೆ ಮತನೀಡಿ ಎಂದು ಕೂಡ ಕೇಳುತ್ತಾರೆ. ಇದನ್ನು ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ. ಇದು ರಣವೀರ್ ಸಿಂಗ್ ಗಮನಕ್ಕೂ ಬಂದಿದೆ. ಅವರು ‘ಡೀಫೇಕ್ ವಿಡಿಯೋ ಬಗ್ಗೆ ಎಚ್ಚರದಿಂದ ಇರಿ’ ಎಂದು ಕೋರಿದ್ದಾರೆ.

ಸದ್ಯ ರಣವೀರ್ ಸಿಂಗ್ ಅವರು ಕೇಸ್ ದಾಖಲು ಮಾಡಿದ್ದಾರೆ. ‘ನಾವು ಕೇಸ್ ದಾಖಲು ಮಾಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಎಫ್​ಐಆರ್ ದಾಖಲಾಗಿದೆ’ ಎಂದು ರಣವೀರ್ ಸಿಂಗ್ ತಂಡ ಪ್ರತಿಕ್ರಿಯಿಸಿದೆ. ಈ ಮೊದಲು ಬಾಲಿವುಡ್ ನಟ ಆಮಿರ್ ಖಾನ್​ಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!