ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದುಬೈನಲ್ಲಿ ರನ್ಯಾ ರಾವ್ ಜೊತೆಗಿದ್ದ ಆಕೆಯ ಗೆಳೆಯ, ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ಬೆಳಗಿನ ಜಾವ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿರುವ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಕಳೆದ 2 ದಿನದಿಂದ ರನ್ಯಾ ಗೆಳೆಯ ತರುಣ್ ರಾಜು ಅವರನ್ನ DRI ವಿಚಾರಣೆ ನಡೆಸಿದೆ.
ಇನ್ನು ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್ರಿಂದ ತರುಣ್ ರಾಜು ಚಿನ್ನ ತರಿಸಿಕೊಳ್ಳುತ್ತಿದ್ದರು.
ಇನ್ನು ರನ್ಯಾ ಮೊಬೈಲ್ ನೋಡುತ್ತಿದ್ದಂತೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ರನ್ಯಾ ಫೋನ್ನಲ್ಲಿ ರಾಜಕೀಯ ನಾಯಕರ ನಂಬರ್ ಪತ್ತೆ ಆಗಿದೆ. ಹಾಲಿ ಸಚಿವರು, ಮಾಜಿ ಸಚಿವರ ನಂಬರ್ಗಳು ಪತ್ತೆ ಆಗಿದ್ದು, ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ರನ್ಯಾ ನಿರಂತರ ಸಂಪರ್ಕದಲ್ಲಿದ್ರಂತೆ. ಇಷ್ಟೇ ಅಲ್ಲ, ಕೆಲ ಪೊಲೀಸ್ ಅಧಿಕಾರಿಗಳ ನಂಬರ್ಗಳು ಕೂಡ ಪತ್ತೆ ಆಗಿವೆ. ಹೀಗಾಗಿ ರನ್ಯಾ ಕಾಲ್ ಡಿಟೇಲ್ಸ್ ಅನ್ನ ಡಿಆರ್ಐ ತಂಡ ಕೆದಕುತ್ತಿದೆ.