ಹೊಸದಿಗಂತ ವರದಿ ಹಾಸನ :
ಅತ್ಯಾಚಾರ ಪ್ರಕರಣದಲ್ಲಿ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳೆದ ಒಂದು ಗಂಟೆಯಿಂದ ಹೊಳೆನರಸೀಪುರದ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಎಸ್ಪಿ ಮಹಮದ್ ಸುಜೇತಾ, ಎಎಸ್‌ಪಿ ವೆಂಕಟೇಶ್ ನಾಯ್ಡು, ಡಿವೈಎಸ್‌ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್‌ರಿಂದ ಅತ್ಯಾಚಾರ ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು.
ಅತ್ಯಾಚಾರ ಪ್ರಕರಣದ ಜೊತೆಗೆ ಕಳೆದ ಮಾರ್ಚ್‌ನಲ್ಲಿ ದೇವರಾಜೇಗೌಡ ವಿರುದ್ದ ಡಿಸಿ ಸಿ.ಸತ್ಯಭಾಮ ಹಾಸನ ನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರು ಹಾಗೂ 2017 ರಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣದ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ವಿಚಾರಣೆ ಮುಗಿದ ಕೂಡಲೇ ದೇವರಾಜೇಗೌಡರನ್ನು ಕೆಲವೇ ಕ್ಷಣಗಳಲ್ಲಿ ಬಂಧನ ಸಾಧ್ಯತೆ ಇದೆ.