ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಭದ್ರತಾ ಕ್ರಮಗಳನ್ನು ಗಣನೀಯವಾಗಿ ಬಲಪಡಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದ್ದಾರೆ.
ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ಖಾತ್ರಿಪಡಿಸಲಾಗುವುದು. ಹಂಪಿ ಮತ್ತಿತರ ಪ್ರವಾಸಿ ಸ್ಥಳಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಿದ್ದೇವೆ. ಈಗ ಇರುವ ಭದ್ರತಾ ಕ್ರಮಗಳನ್ನು ಸರ್ಕಾರ ಮರುಪರಿಶೀಲಿಸಲಿದೆ ಎಂದರು.
ನಾವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಈ ರೀತಿಯ ಘಟನೆಗಳು ಪ್ರವಾಸಿಗರನ್ನು ನಮ್ಮ ದೇಶಕ್ಕೆ ಭೇಟಿ ನೀಡುವುದನ್ನು ತಡೆಯುತ್ತವೆ ಎಂದು ಅವರು ಹೇಳಿದರು.
ಮಾರ್ಚ್ 6ರಂದು ರಾತ್ರಿ 10.30 ತುಂಗಭದ್ರಾ ನದಿ ಕ್ಯಾನಾಲ್ ಪಕ್ಕ ಕುಳಿತಿರುತ್ತಾರೆ. ಅಲ್ಲಿಗೆ ಬೈಕ್‌ನಲ್ಲಿ ಬಂದಿದ್ದ ಮೂವರು ಸವಾರರು ಆ ಪ್ರವಾಸಿಗರಿಗೆ ಪೆಟ್ರೋಲ್ ಇದೆಯಾ ಎಂದು ವಿಚಾರಿಸಿದ್ದಾರೆ. ಮಾತನಾಡುತ್ತಾ ಮೈ ಮೇಲೆ ಎರಗಿದಾಗ ಘರ್ಷಣೆ ನಡೆದಿದೆ. ಆಗ ಒಬ್ಬನನ್ನು ಕೆನಾಲ್‌ಗೆ ತಳ್ಳಿದ್ದಾರೆ. ಪ್ರಕರಣ ಸಂಬಂಧ ಮರುದಿನ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.