ಚಿತ್ರಹಿಂಸೆ ನೀಡಿ ಯುವತಿಯ ಅತ್ಯಾಚಾರ: ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರೀತಿಯ ನಾಟಕವಾಡಿ ಕೊಠಡಿಯಲ್ಲಿ ಕೂಡಿಟ್ಟು ಆಕೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ಬಾಯಿಗೆ ಖಾರ ಪುಡಿ ತುರಿಕಿದ ಆರೋಪಿ, ತುಟಿಗಳಿಗೆ ಫೆವಿಕ್ವಿಕ್ ಗಮ್ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ.

ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆ ದಾಖಲಿಸಿದ್ದು, ಆರೋಪಿ ಆಯನ್ ಪಠಾಣ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಯುವತಿಯ ಮನೆಯ ಪಕ್ಕದಲ್ಲೇ ಇದ್ದ ಆರೋಪಿ ಆಯನ್ ಪಠಾಣ್ ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ. ಯುವತಿ ಪೋಷಕರು ಈ ಕುರಿತು ಮಗಳಿಗೆ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಆಯನ್ ಪಠಾಣ್ ಕಾಟ ವಿಪರೀತವಾಗುತ್ತಿದ್ದಂತೆ ಬೇರೆ ಗ್ರಾಮಕ್ಕೆ ತೆರಳಿದ್ದರು. ಆದರೆ ಪಠಾಣ್ ಬಣ್ಣದ ಮಾತಿಗೆ ಮರುಳಾದ ಯುವತಿ ಮತ್ತೆ ಗುನಾಗೆ ಆಗಮಿಸಿದ್ದಳು.

ಮಾತುಕತೆಗೆ ಕರೆಸಿಕೊಂಡ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಒತ್ತಾಯಿಸಿದ್ದಾನೆ. ತಾನು ಮೋಸಹೋಗಿದ್ದೇನೆ ಎಂಬುದು ಅರಿವಾಗುತ್ತಿದ್ದಂತೆ ಯುವತಿ ವಿರೋಧಿಸಲು ಆರಂಭಿಸಿದ್ದಾಳೆ. ಆದರೆ ಕೊಠಡಿಯಲ್ಲಿ ಕೂಡಿ ಹಾಕಿದ ಆಯನ್ ಪಠಾಣ್, ಆಕೆಯ ಬಾಯಿಗೆ ಖಾರ ಪುಡಿ ಹಾಕಿ ತುಟಿಗಳನ್ನು ಗಮ್ ಹಾಕಿ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ.

ಸ್ಥಳೀಯರ ನೆರವಿನಿಂದ ಪ್ರಕರಣ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಆಯನ್ ಪಠಾಣ್ ಅರೆಸ್ಟ್ ಮಾಡಿದ್ದಾರೆ.

ಇದೀಗ ಯುವಿತಿ ಕುಟುಂಬಸ್ಥರ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಇತ್ತ ಆಸ್ಪತ್ರೆ ದಾಖಲಾಗಿರುವ ಯುವತಿಗೆ ಚಿಕಿತ್ಸೆ ಮುಂದುವರಿದಿದೆ.

ಆರೋಪಿ ಆಯನ್ ವಿರುದ್ದ ಪೊಲೀಸರು ಸೆಕ್ಷನ್376 ರೇಪ್ ಪ್ರಕರಣ, 294 ಅವಾಚ್ಯ ಶಬ್ದಗಳಿಂದ ಬೈಗುಳ, ಸೆಕ್ಷನ್ 323 ಹಲ್ಲೆ ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!