ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧೆಡೆ ವರುಣ ಎಂಟ್ರಿಕೊಡುತ್ತಿದ್ದು, ಬೆಂಗಳೂರಿನ (Bengaluru) ಕೆಂಗೇರಿ (Kengeri) ಸೇರಿ ನಗರದ ಹಲವೆಡೆ ಮಳೆರಾಯನ ಆಗಮನವಾಗಿದೆ.
ಮಳೆಗೆ ರಾಮನಗರದ ವಡ್ಡರಹಳ್ಳಿಯಲ್ಲಿ ಬಿರಗಾಳಿಸಹಿತ ಭಾರಿ ಮಳೆಗೆ ಎರಡ್ಮೂರು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಳೆನರಸೀಪುರದಲ್ಲಿ ಮಳೆ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ಹಿಡಿದು ಭಾಷಣ ಕೇಳಿದ್ದಾರೆ.
ಕೊಡಗಿನಲ್ಲಿ ಒಂದು ವಾರದಿಂದ ಮಳೆ ಆಗ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಶಿವಮೊಗ್ಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಆಗಿದೆ.