ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಜನನಿಬಿಡ ಸ್ವರ್ಗೇಟ್ ಎಸ್ಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಿವಶಾಹಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಬಸ್‌ನಲ್ಲಿ ನೂರಾರು ಬಳಕೆಯಾಗಿರುವ ಕಾಂಡೋಮ್‌ಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಹಳೆಯ ಬಳಕೆಯಾಗದ ಬಸ್ಗಳನ್ನು ಅಲ್ಲಿ ನಿಲ್ಲಿಸಲಾಗಿದ್ದು, ಈ ಎಲ್ಲಾ ಬಸ್ಗಳಲ್ಲಿ ಬುಟ್ಟಿಗಟ್ಟಲೇ ಕಾಂಡೋಮ್‌ಗಳು, ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಇದು ಅಪರಾಧ ಚಟುವಟಿಕೆಗಳ ತಾಣವಾಗಿತ್ತು ಎಂಬುದು ತಿಳಿದುಬಂದಿದೆ. ಬಿಯರ್ ಬಾಟಲಿಗಳು, ಸಿಗರೇಟ್ ಪ್ಯಾಕ್ಗಳು, ಕಾಂಡೋಮ್‌ಗಳು, ಮಹಿಳೆಯರ ಬಟ್ಟೆಗಳು ಹತ್ತಾರು ವಸ್ತುಗಳು ಪತ್ತೆಯಾಗಿವೆ.
ಅತ್ಯಾಚಾರದ ಸುದ್ದಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಶಿವಸೇನೆಯ ಸುಷ್ಮಾ ಅಂಧಾರೆ ಮತ್ತು ಕಸ್ಬಾದ ಮಾಜಿ ಶಾಸಕ ರವೀಂದ್ರ ಧಂಗೇಕರ್ ಮತ್ತು ಎಎಪಿಯ ಮುಕುಂದ್ ಕಿರ್ದತ್ ಅವರಂತಹ ನಾಯಕರು ನಗರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಸೇನೆ ನಾಯಕ ವಸಂತ್ ಮೋರ್ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿರುವ ಭದ್ರತಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಈಗ, ನಗರವು ಅತ್ಯಾಚಾರದ ಆಘಾತದಿಂದ ನಲುಗುತ್ತಿದ್ದಂತೆ, ಸ್ವರ್ಗೇಟ್ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿರುವುದು ಮತ್ತಷ್ಟು ಆಘಾತ ತಂದಿದೆ ಎಂದಿದ್ದಾರೆ.