ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಯಮ ಉಲ್ಲಂಘನೆ ಮಾಡಿ ಎಎಸ್‌ವಿಎಂ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವನ್ನು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಎದುರಿಸುತ್ತಿದ್ದು, ಅವರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲು ವಿಶೇಷ ತನಿಖಾ ತಂಡವು (ಎಸ್‌ಐಟಿ) ಇಂಗ್ಲಿಷ್ ನಲ್ಲಿ ರಾಜ್ಯಪಾಲರಿಗೆ ಪುನಃ ಪ್ರಸ್ತಾವನೆ ನೀಡಿದೆ.
ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್‌ಐಟಿ ಅಧಿಕಾರಿಗಳು ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರಿಗೆ 2023ರಲ್ಲಿ ಮೊದಲ ಬಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಗೆಹಲೋಟ್
ಇದಾಗಿ 2024ರ ಜುಲೈ ತಿಂಗಳಲ್ಲಿ ಆರೋಪಗಳಿಗೆ ಕೆಲವು ಸ್ಪಷ್ಟನೆಗಳನ್ನು ಒದಗಿಸುವಂತೆ ಸೂಚಿಸಿ ರಾಜ್ಯಪಾಲರು ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಗಳೊಂದಿಗೆ 2024ರ ಆಗಸ್ಟ್‌ನಲ್ಲಿ ಹೊಸ ಪ್ರಸ್ತಾವ ಸಲ್ಲಿಸಿದ್ದ ತನಿಖಾ ತಂಡ, ಆರೋಪಪಟ್ಟಿ ಸಲ್ಲಿಸಲು ಮತ್ತೆ ಅನುಮತಿ ಕೋರಿತ್ತು. ಆಗ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ಎಲ್ಲ ದಾಖಲೆಗಳು ಹಾಗೂ ಕರಡು ಆರೋಪಪಟ್ಟಿಯ ಪ್ರತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಸಲ್ಲಿಸುವಂತೆ ಸೂಚಿಸಿದ್ದರು.
2025ರ ಜನವರಿ 21ರಂದು ಭಾಷಾಂತರಿಸಿ, ರಾಜಭವನಕ್ಕೆ ಕಳುಹಿಸಿಕೊಡಲಾಗಿದ್ದು, ಇಲ್ಲಿಯವರೆಗೂ ರಾಜ್ಯಪಾಲರಿಂದ ಅಧಿಕಾರಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ಹೇಳಿವೆ.