ರ‍್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರ‍್ಯಾಪಿಡೋ ಚಾಲಕನಯೊಬ್ಬ ಪ್ರಯಾಣದ ವೇಳೆ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅದರಿಂದ ತಪ್ಪಿಸಿಕೊಳ್ಳಲು ಆಕೆ ಚಲಿಸುತ್ತಿದ್ದ ಬೈಕ್ನಿಂದ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ಏ.21ರಂದು ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಯಲಹಂಕ ಉಪನಗರ ಠಾಣೆ ಪೊಲೀಸರು ಚಾಲಕ ದೀಪಕ್ ರಾವ್ (27)ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆಒಪ್ಪಿಸಿದ್ದಾರೆ.

ಏಪ್ರಿಲ್​ 21ರ ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತನ ಮನೆಗೆ ಹೋಗಲು ಯುವತಿ ರ‍್ಯಾಪಿಡೋ ಬೈಕ್ ಬುಕ್ಮಾಡಿದ್ದಳು. ಬೈಕ್ ಹತ್ತಿಸಿಕೊಂಡ ಆರೋಪಿ ನಂತರ ಒಟಿಪಿ ಪಡೆಯುವ ನೆಪದಲ್ಲಿ ಮೊಬೈಲ್ಕಸಿದುಕೊಂಡು ಅನುಚಿತವಾಗಿ ವರ್ತಿಸತೊಡಗಿದ್ದ. ನಂತರ ಹೋಗಬೇಕಿದ್ದ ಮಾರ್ಗದಲ್ಲಿ ತೆರಳದೇ ದೊಡ್ಡಬಳ್ಳಾಪುರ ರಸ್ತೆ ಕಡೆ ಬೈಕ್ ತಿರುಗಿಸಿದ್ದ. ಇದರಿಂದ ಆತಂಕಗೊಂಡ ಯುವತಿ ಪ್ರಶ್ನಿಸುತ್ತಿದ್ದಂತೆ ರ್ಯಾಪಿಡೋ ಚಾಲಕ ವೇಗವಾಗಿ ಬೈಕ್ಚಲಾಯಿಸಿದ್ದ. ಇದರಿಂದ ಮತ್ತಷ್ಟು ಗಾಬರಿಯಾದ ಯುವತಿ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಮುಂಭಾಗ ಬೈಕ್ನಿಂದ ರಸ್ತೆಗೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಖಾಸಗಿ ಕಾಲೇಜು ಸೆಕ್ಯುರಿಟಿ ಸಿಬ್ಬಂದಿ ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಇದನ್ನ ಗಮನಿಸಿದ ರ್ಯಾಪಿಡೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಬೈಕ್ನಿಂದ ರಸ್ತೆಗೆ ಬಿದ್ದಿದ್ದರಿಂದ ಯುವತಿಯ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರ ಮೊಬೈಲ್ಪಡೆದ ಯುವತಿ ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!