ಅಪರೂಪದ ಪಿಂಕ್‌ ಡೈಮಂಡ್ ಹರಾಜು: ದರ ಕೇಳಿದ್ರೆ ಶಾಕ್‌ ಆಗೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಣ್ಣಿನಲ್ಲಿದ್ದರೂ ವಜ್ರ…ವಜ್ರವೇ. ಅವುಗಳ ಮೌಲ್ಯ ಕೂಡ ವಜ್ರದ ಹೊಳಪಿನಷ್ಟೇ ಉತ್ತಮವಾಗಿರುತ್ತದೆ. ಅಂತಹ ಅಪರೂಪದ ಮತ್ತು ಭವ್ಯವಾದ ವಜ್ರವೊಂದು ಹರಾಜಾಗೆ ಬಂದಿದೆ. ಅದು ಅಪರೂಪದ ‘ಗುಲಾಬಿ ವಜ್ರ'(ಪಿಂಕ್‌ ಡೈಮಂಡ್). ಅಪರೂಪದ ಫಾರ್ಚೂನ್ ಪಿಂಕ್ ಪೇರ್ ಡೈಮಂಡ್ ಎರಡೂ ಬದಿಯಲ್ಲಿ ಬಿಳಿ ಮತ್ತು ಮಧ್ಯದಲ್ಲಿ ಗುಲಾಬಿ ಬಣ್ಣದಿಂದ ಹೊಳೆಯುತ್ತಿರುತ್ತದೆ. ಈ ಉತ್ತಮ ಗುಣಮಟ್ಟದ ವಜ್ರ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಈ ಪಿಂಕ್ ಡೈಮಂಡ್ 18.18 ಕ್ಯಾರೆಟ್ ತೂಗುತ್ತದೆ. ಕ್ರಿಸ್ಟೀಸ್ ಹರಾಜು ಸಂಸ್ತೆ ಈ ವಜ್ರವನ್ನು ನವೆಂಬರ್ 8 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಹರಾಜು ಮಾಡಲು ಸಿದ್ಧತೆ ನಡೆಸಿದೆ. ಅತಿ ದೊಡ್ಡ ಪಿಯರ್-ಆಕಾರದ ಗುಲಾಬಿ ವಜ್ರವನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುವುದು ಎಂದು ಈ ಸಂಸ್ಥೆ ಹೇಳಿದೆ.

ಇದರ ಅಂದಾಜು ಎಷ್ಟೇ ಕಡಿಮೆ ಅಂತ ಲೆಕ್ಕ ಹಾಕಿದ್ರೂ ಕೂಡಾ 25 ಮಿಲಿಯನ್‌ನಿಂದ 35 ಮಿಲಿಯನ್ ಯುಎಸ್ ಡಾಲರ್‌ ಸಿಗುವ ನಿರೀಕ್ಷೆಯಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ 204 ಕೋಟಿ 73 ಲಕ್ಷದಿಂದ 285 ಕೋಟಿ 21 ಲಕ್ಷ ರೂಪಾಯಿ. ಈ ಅಪರೂಪದ ಪಿಂಕ್ ಪಿಯರ್ ವಜ್ರ ಗ್ರಾಹಕರ ಗಮನ ಸೆಳೆಯಲಿದೆ ಎಂಬುದು ಕ್ರಿಸ್ಟೀಸ್ ಹರಾಜು ಹೌಸ್ ನ ಸಂಘಟಕರ ನಂಬಿಕೆ. ಈ ಅಪರೂಪದ ವ್ಜರ ಯಾರ ಪಾಲಾಗಿಲಿದೆಯೋ ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!