ಪಿಎಫ್‌ಐ ಬ್ಯಾನ್: ಇನ್ನು ಜನ ನೆಮ್ಮದಿಯಿಂದ ಬದುಕಬಹುದು, ಯತ್ನಾಳ ಹೇಳಿಕೆ

ದಿಗಂತ ವರದಿ ವಿಜಯಪುರ:

ಪಿಎಫ್’ಐ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿಗಳು, ಕೇಂದ್ರ ಗೃಹ ಸಚಿವರು ಪಿಎಫ್’ಐ ಬ್ಯಾನ್ ಮಾಡಿದ್ದಾರೆ. ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್’ಐ ಬ್ಯಾನ್ ಮಾಡಲು ಆಗ್ರಹ ಇತ್ತು. ಇಂದು ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.

ಇನ್ನು ಆರ್’ಎಸ್’ಎಸ್ ದೇಶಭಕ್ತರ ಸಂಘಟನೆ ಆಗಿದೆ. ದೇಶದ ಉನ್ನತಸ್ಥಾನದಲ್ಲಿರೋದು ಆರ್’ಎಸ್’ಎಸ್ ನಿಂದ ಬಂದವರು. ಆರ್ ಎಸ್ ಎಸ್ ಹಿಂಸಾಕೃತ್ಯದಲ್ಲಿ ತೊಡಗಿಲ್ಲ. ಮದ್ದು, ಗುಂಡು ಸಂಗ್ರಹಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಅದಕ್ಕಾಗಿ ಅದರ ಮೇಲಿದ್ದ ನಿಷೇಧವನ್ನ ಸುಪ್ರೀಂ ಕೋರ್ಟ್ ವಾಪಸ್ ತೆಗೆದುಕೊಂಡಿದೆ.
ಐದು ವರ್ಷದಲ್ಲಿ ಪಿಎಫ್’ಐಯನ್ನ ಬುಡದಿಂದ ಕಿತ್ತು ಹಾಕಬೇಕು. ಯಾವ ಹುತ್ತದಿಂದ ಯಾವ ಹಾವು ಬರುತ್ತದೆ ಗೊತ್ತಿಲ್ಲ. ಅಧ್ಯಯನ ಮಾಡಿ ಸಂಪೂರ್ಣ ಸರ್ವನಾಶ ಮಾಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!