Saturday, December 9, 2023

Latest Posts

ಒಟಿಟಿ ಮೆಟ್ಟಿಲೇರಿದ ರಶ್ಮಿಕಾ ಅಭಿನಯದ ಬಾಲಿವುಡ್‌ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣಗೆ ದಕ್ಷಿಣದಲ್ಲಿ ಸಿಕ್ಕ ಅದೃಷ್ಟ ಉತ್ತರದಲ್ಲಿ ಕೈ ತಪ್ಪಿದೆ. ಈ ಚೆಲುವೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದರೆ ಸಿನಿಮಾ ಖಂಡಿತಾ ಸಕ್ಸಸ್ ಆಗುತ್ತೆ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದು. ಆದರೆ ನ್ಯಾಶನಲ್ ಕ್ರಶ್ ಎಂದು ಗುರುತಿಸಿಕೊಂಡ ರಶ್ಮಿಕಾ ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿರುವ ‘ಗುಡ್ ಬೈ’ ಚಿತ್ರ ಮಾತ್ರ ಮಕಾಡೆ ಮಲಗಿದೆ. ಈ ಹಿನ್ನೆಲೆಯಲ್ಲಿ ಇದಾಗಲೇ ಒಟಿಟಿ ಮೆಟ್ಟಿಲು ಹತ್ತಲು ಸಿದ್ದವಾಗಿದೆ.

ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಟಾಕ್ ಪಡೆದುಕೊಂಡರೂ ಆದರೆ ವಾಣಿಜ್ಯಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಲಿಲ್ಲ. ಹಾಗಾಗಿ ಚಿತ್ರತಂಡ ಈ ಚಿತ್ರವನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ. ಜನಪ್ರಿಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಗುಡ್‌ಬೈ ಸ್ಟ್ರೀಮ್ ಆಗಲಿದೆ. ಡಿಸೆಂಬರ್ 02 ರಿಂದ OTT ನಲ್ಲಿ ಈ ಚಿತ್ರ ಸ್ಟ್ರೀಮ್ ಆಗಲಿದೆ ಎಂದು Netflix ಹೇಳಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಮತ್ತು ಒಟಿಟಿಯಲ್ಲಿ ರಶ್ಮಿಕಾ ಬಾಲವುಡ್‌ನ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!